ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೋದ್ಯಮ ಉತ್ತೇಜನಕ್ಕೆ ಎಫ್‌ಕೆಸಿಸಿಐ ಕಾರ್ಯಕ್ರಮ

Last Updated 23 ಸೆಪ್ಟೆಂಬರ್ 2022, 16:07 IST
ಅಕ್ಷರ ಗಾತ್ರ

ಬೆಂಗಳೂರು: ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ರಫ್ತು ಉತ್ತೇಜನಾ ಮಂಡಳಿ (ಇಎಸ್‌ಸಿ), ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್ಸ್‌ ಆಫ್ ಇಂಡಿಯಾ (ಎಸ್‌ಟಿಪಿಐ) ಹಾಗೂ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಜೊತೆಯಾಗಿ ‘ನವೋದ್ಯಮ ಶೃಂಗ – ಮುಂದಿನ ಯೂನಿಕಾರ್ನ್‌ ನಿರ್ಮಾಣ’ ಕಾರ್ಯಕ್ರಮ ಆಯೋಜಿಸಲಿವೆ.

ದೇಶದಲ್ಲಿ ನವೋದ್ಯಮ ಸಂಸ್ಕೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ಆಯ್ದ ರಾಜ್ಯಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಆಂಧ್ರಪ್ರದೇಶ, ರಾಜಸ್ಥಾನ, ಗುಜರಾತ್, ಕರ್ನಾಟಕ ಮತ್ತು ನವದೆಹಲಿ ಈ ಕಾರ್ಯಕ್ರಮ ಆಯೋಜಿಸಲು ಮುಂದೆ ಬಂದಿವೆ. ಈ ರಾಜ್ಯಗಳಲ್ಲಿ ಶೃಂಗ ನಡೆದ ನಂತರದಲ್ಲಿ, ಬೇರೆ ರಾಜ್ಯಗಳ ನವೋದ್ಯಮಗಳಿಗೂ ಭಾಗವಹಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ ವರ್ಚುವಲ್ ಆಗಿ ನವೋದ್ಯಮಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಐ.ಎಸ್. ಪ್ರಸಾದ್ ತಿಳಿಸಿದ್ದಾರೆ.

ರಾಜ್ಯಗಳ ಮಟ್ಟದಲ್ಲಿ ಆಯ್ಕೆಯಾದ ನವೋದ್ಯಮಗಳನ್ನು ರಾಷ್ಟ್ರಮಟ್ಟದ ಸಮಾವೇಶಕ್ಕೆ ಆಹ್ವಾನಿಸಲಾಗುತ್ತದೆ. ಅಲ್ಲಿ ಅಂತಿಮ ಸುತ್ತಿನ ಆಯ್ಕೆ ನಡೆಯಲಿದೆ. ಆಯ್ಕೆಯಾಗುವ ನವೋದ್ಯಮಗಳಿಗೆ ಅಮೆರಿಕ ಪ್ರವಾಸಕ್ಕೆ ನೆರವು ನೀಡಲಾಗುತ್ತದೆ. ಅಲ್ಲಿ ಅವು, ಅಮೆರಿಕದ ಹೂಡಿಕೆದಾರರು ಹಾಗೂ ವೆಂಚರ್‌ ಕ್ಯಾಪಿಟಲಿಸ್ಟ್‌ಗಳನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ.

ಈಕಾರ್ಯಕ್ರಮಕ್ಕೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಬೆಂಬಲ ಇದೆ ಎಂದು ಪ್ರಸಾದ್ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT