ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕರ್ನಾಟಕದಲ್ಲಿ ₹1,200 ಕೋಟಿ ಹೂಡಿಕೆ ಮಾಡಿದ ಫಾಕ್ಸ್‌ಕಾನ್‌

14.4 ಕೋಟಿ ಡಾಲರ್‌ ಹೂಡಿಕೆ ಮಾಡಿದ ಫಾಕ್ಸ್‌ಕಾನ್‌
Published 23 ಆಗಸ್ಟ್ 2024, 14:25 IST
Last Updated 23 ಆಗಸ್ಟ್ 2024, 14:25 IST
ಅಕ್ಷರ ಗಾತ್ರ

ನವದೆಹಲಿ: ಐಫೋನ್‌ ತಯಾರಿಕಾ ಕಂಪನಿ ಫಾಕ್ಸ್‌ಕಾನ್ ಕರ್ನಾಟಕದಲ್ಲಿನ ತನ್ನ ಫಾಕ್ಸ್‌ಕಾನ್ ಹಾನ್ ಹೈ ಟೆಕ್ನಾಲಜಿ ಇಂಡಿಯಾ ಮೆಗಾ ಡೆವಲಪ್‌ಮೆಂಟ್ ಪ್ರೈವೆಟ್ ಲಿಮಿಟೆಡ್‌ನಲ್ಲಿ ಸುಮಾರು ₹1,200 ಕೋಟಿ (14.4 ಕೋಟಿ ಡಾಲರ್‌) ಹೂಡಿಕೆ ಮಾಡಿದೆ ಎಂದು ಕಂಪನಿಯು ಷೇರುಪೇಟೆಗೆ ತಿಳಿಸಿದೆ.

ಫಾಕ್ಸ್‌ಕಾನ್ ಆಗಸ್ಟ್ 21ರಂದು ಫಾಕ್ಸ್‌ಕಾನ್ ಹಾನ್ ಹೈ ಟೆಕ್ನಾಲಜಿ ಇಂಡಿಯಾ ಮೆಗಾ ಡೆವಲಪ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ನ 120 ಕೋಟಿ ಷೇರುಗಳನ್ನು ಪ್ರತಿ ಷೇರಿಗೆ ₹10ರಂತೆ ಖರೀದಿಸಿದೆ.

ದೊಡ್ಡಬಳ್ಳಾಪುರದ ಬಳಿ ಬೃಹತ್ ಐಫೋನ್‌ ತಯಾರಿಕಾ ಘಟಕವನ್ನು ಸ್ಥಾಪಿಸಲು ಫಾಕ್ಸ್‌ಕಾನ್ ₹25 ಸಾವಿರ ಕೋಟಿ ಹೂಡಿಕೆ ಮಾಡಲು ಯೋಜಿಸಿದೆ. ಈ ಘಟಕದಿಂದ 40 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಕರ್ನಾಟಕ ಸರ್ಕಾರ ಕಳೆದ ವಾರ ತಿಳಿಸಿತ್ತು.

ಹೊಸ ಹೂಡಿಕೆಯಿಂದ ಫಾಕ್ಸ್‌ಕಾನ್ ₹13,800 ಕೋಟಿಯನ್ನು ಕರ್ನಾಟಕದ ಘಟಕದಲ್ಲಿ ಹೂಡಿಕೆ ಮಾಡಿದಂತಾಗಿದೆ.

Highlights -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT