ನವದೆಹಲಿ: ದೇಶದ ಫಾಕ್ಸ್ಕಾನ್ ಘಟಕದ ಉತ್ಪಾದನೆಯ ಮೇಲೆ ಸರ್ಕಾರವು ಮೇಲ್ವಿಚಾರಣೆ ಮಾಡುತ್ತಿದೆ ಎಂದು ಸರ್ಕಾರದ ಮೂಲಗಳು ಶುಕ್ರವಾರ ತಿಳಿಸಿವೆ.

ಆ್ಯಪಲ್ ಕಂಪನಿಗೆ ಸ್ಮಾರ್ಟ್ಫೋನ್ಗಳನ್ನು ತಯಾರಿಸಿ ಕೊಡುವ ಫಾಕ್ಸ್ಕಾನ್ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಚೀನಾದ ನೂರಾರು ತಂತ್ರಜ್ಞರು ಸ್ವದೇಶಕ್ಕೆ ಮರಳಿದ್ದಾರೆ. ಇದು ಐಫೋನ್ 17 ಉತ್ಪಾದನೆಗೆ ಅಡ್ಡಿಯಾಗಬಹುದು ಎನ್ನಲಾಗಿದೆ. ಆದರೆ, ಅಂದುಕೊಂಡಂತೆಯೇ ಉತ್ಪಾದನೆ ನಡೆಯಲಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.

ಸರ್ಕಾರವು ಪರಿಸ್ಥಿತಿಯ ಮೇಲ್ವಿಚಾರಣೆ ಮಾಡುತ್ತಿದೆ. ಆ್ಯಪಲ್ ಪರ್ಯಾಯಗಳನ್ನು ಹೊಂದಿದೆ. ಸಮಸ್ಯೆ ಆ್ಯಪಲ್ ಮತ್ತು ಫಾಕ್ಸ್ಕಾನ್ನ ವಿಷಯವಾಗಿದೆ ಎಂದು ತಿಳಿಸಿದೆ. ಮೊಬೈಲ್ ಫೋನ್ಗಳ ತಯಾರಿಕೆಗೆ ಬಳಸುವ ಹೆಚ್ಚಿನ ಸರಕುಗಳು ಚೀನಾದಿಂದ ಆಮದಾಗುತ್ತವೆ. ಚೀನಾದ ತಂತ್ರಜ್ಞರು ಇದರ ನಿರ್ವಹಣೆಯಲ್ಲಿ ಹೆಚ್ಚಿನ ಪರಿಣತಿಯನ್ನು ಹೊಂದಿದ್ದಾರೆ.

ಚೀನಾದ ಕಾರ್ಮಿಕರಿಗೆ ಸರ್ಕಾರ ವೀಸಾ ಸೌಲಭ್ಯ ಕಲ್ಪಿಸಿದೆ. ತಯಾರಿಕೆಯಲ್ಲಿ ಯಾವುದೇ ಅಡಚಣೆ ಉಂಟಾಗದಂತೆ ಕಂಪನಿಗಳು ವ್ಯವಸ್ಥೆಗಳನ್ನು ಮಾಡಬೇಕಾಗುತ್ತದೆ ಎಂದು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.