ಗುರುವಾರ , ಏಪ್ರಿಲ್ 2, 2020
19 °C

ಎಫ್‌ಪಿಐ ಹೊರಹರಿವು ₹8,319 ಕೋಟಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಪಿಐ) ಆಗಸ್ಟ್‌ 1 ರಿಂದ 16ರವರೆಗೆ ಬಂಡವಾಳ ಮಾರುಕಟ್ಟೆ
ಯಿಂದ ₹ 8,319 ಕೋಟಿ ಹಿಂದಕ್ಕೆ ಪಡೆದಿದ್ದಾರೆ.

ಹೂಡಿಕೆದಾರರು ₹ 10,416 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರೆ, ₹ 2,096 ಕೋಟಿ ಮೌಲ್ಯದ ಸಾಲಪತ್ರಗಳನ್ನು ಖರೀದಿಸಿದ್ದಾರೆ. ಜುಲೈನಲ್ಲಿ ₹ 2,986 ಕೋಟಿ ಮೌಲ್ಯದ ಬಂಡವಾಳ ಹಿಂದಕ್ಕೆ ಪಡೆದಿದ್ದರು.

‘ಆಗಸ್ಟ್‌ನಲ್ಲಿ ನಡೆದಿರುವ 10 ದಿನಗಳ ವಹಿವಾಟಿನಲ್ಲಿ 9 ದಿನಗಳ ಕಾಲ ಮಾರಾಟ ಮಾಡಿದ್ದಾರೆ. ಇದು ಹೂಡಿಕೆ ಬಗೆಗಿನ ನಕಾರಾತ್ಮಕ ಭಾವನೆಯನ್ನು ತೋರಿಸುತ್ತದೆ’ ಎಂದು ಮಾರ್ನಿಂಗ್‌ಸ್ಟಾರ್‌ ಕಂಪನಿಯ ಹಿರಿಯ ವ್ಯವಸ್ಥಾಪಕ ಸಂಶೋಧಕ ಹಿಮಾಂಶು ಶ್ರೀವಾಸ್ತವ ಅವರು ಹೇಳಿದ್ದಾರೆ.

‘ಕೇಂದ್ರ ಬಜೆಟ್‌ನಲ್ಲಿ ಸಿರಿವಂತರ ಮೇಲೆ ಸರ್ಚಾರ್ಜ್‌ ಹೆಚ್ಚಿಸಲಾಗಿದೆ. ಎಫ್‌ಪಿಐ ಮೇಲೆ ಸರ್ಚಾರ್ಜ್‌ ಹಿಂದೆಪಡೆಯುವ ಕುರಿತು ಸ್ಪಷ್ಟನೆ ಸಿಗದೇ ಇರುವುದರಿಂದ ಹೂಡಿಕೆದಾರರು ಆತಂಕಕ್ಕೆ ಒಳಗಾಗಿ ಮಾರಾಟಕ್ಕೆ ಗಮನ ನೀಡಿದ್ದಾರೆ’ ಎಂದು ವಿವರಿಸಿದ್ದಾರೆ.

ಭಾರತದ ಆರ್ಥಿಕತೆಯ ಮಂದಗತಿಯ ಬೆಳವಣಿಗೆ, ಕಂಪನಿಗಳ ತ್ರೈಮಾಸಿಕ ಪ್ರಗತಿ ಮಾರುಕಟ್ಟೆಯ ನಿರೀಕ್ಷೆಗಿಂತಲೂ ಕಡಿಮೆ ಇರುವುದು ಹೀಗೆ ಇನ್ನೂ ಹಲವು ಸಂಗತಿಗಳು ಷೇರುಪೇಟೆಯಲ್ಲಿ ನಕಾರಾತ್ಮಕ ಚಟುವಟಿಕೆಯನ್ನು ಹೆಚ್ಚಾಗುವಂತೆ ಮಾಡಿವೆ.

ಅಮೆರಿಕ–ಚೀನಾ ಮಧ್ಯೆ ನಡೆಯುತ್ತಿರುವ ವಾಣಿಜ್ಯ ಸಮರವು ಜಾಗತಿಕ ಹೂಡಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಭಾರತದ ಮೇಲೆಯೂ ಅದು ಪ್ರಭಾವಿಸಿದೆ ಎಂದು ತಜ್ಞರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು