ಮೇ 2 – 27ರ ಅವಧಿಯಲ್ಲಿ ₹39 ಸಾವಿರ ಕೋಟಿ ಹಿಂಪಡೆದ ವಿದೇಶಿ ಬಂಡವಾಳ ಹೂಡಿಕೆದಾರರು

ನವದೆಹಲಿ: ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್ಪಿಐ) ಮೇ 2ರಿಂದ 27ರವರೆಗಿನ ಅವಧಿಯಲ್ಲಿ ಭಾರತದ ಷೇರುಪೇಟೆಯಿಂದ ₹39,137 ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದಾರೆ.
ಅಮೆರಿಕದ ಬಾಂಡ್ ಗಳಿಕೆ ಹೆಚ್ಚಾಗುತ್ತಿರುವುದು, ಡಾಲರ್ ಮೌಲ್ಯ ವೃದ್ಧಿ ಹಾಗೂ ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ನಿಂದ ಬಡ್ಡಿದರ ಏರಿಕೆಯ ಕಾರಣಗಳಿಂದಾಗಿ ಬಂಡವಾಳ ಹೊರಹರಿವು ಹೆಚ್ಚಾಗುತ್ತಿದೆ.
ಮೇನಲ್ಲಿ ಈವರೆಗೆ ಆಗಿರುವ ಬಂಡವಾಳ ಹೊರಹರಿವನ್ನೂ ಪರಿಗಣಿಸಿದರೆ, 2022ರಲ್ಲಿ ಈವರೆಗೆ ಒಟ್ಟಾರೆ ₹ 1.66 ಲಕ್ಷ ಕೋಟಿ ಬಂಡವಾಳವನ್ನು ಹಿಂದಕ್ಕೆ ಪಡೆದಂತಾಗಿದೆ.
ವೇಗದ ಕಾರ್ಯಾಚರಣೆ, ಗುಣಮಟ್ಟದ ಫೊಟೊಗೆ Samsung Galaxy M53
ಕಚ್ಚಾ ತೈಲ ದರ ಏರಿಕೆ, ಹಣದುಬ್ಬರ ಹೆಚ್ಚಳ ಮತ್ತು ಕೇಂದ್ರೀಯ ಬ್ಯಾಂಕ್ ತನ್ನ ಹಣಕಾಸು ನೀತಿಯನ್ನು ಬಿಗಿಗೊಳಿಸಿರುವ ಕಾರಣ ಮುಂಬರುವ ದಿನಗಳಲ್ಲಿಯೂ ಎಫ್ಪಿಐ ಒಳಹರಿವು ಅಸ್ಥಿರವಾಗಿರಲಿದೆ ಎಂದು ಕೋಟಕ್ ಸೆಕ್ಯುರಿಟೀಸ್ನ ಈಕ್ವಿಟಿ ಸಂಶೋಧನೆಗಳ ಮುಖ್ಯಸ್ಥ ಶ್ರೀಕಾಂತ್ ಚೌಹಾಣ್ ಹೇಳಿದ್ದಾರೆ.
ವಿದೇಶಿ ಬಂಡವಾಳ ಹೂಡಿಕೆದಾರರು ದೇಶದ ಸಾಲಪತ್ರ ಮಾರುಕಟ್ಟೆಯಿಂದಲೂ ಮೇ 2–27ರ ನಡುವಿನ ಅವಧಿಯಲ್ಲಿ ₹ 6 ಸಾವಿರ ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.