ಭಾನುವಾರ, ಸೆಪ್ಟೆಂಬರ್ 19, 2021
27 °C

ಎಫ್‌ಪಿಐ: ಆಗಸ್ಟ್‌ ಮೊದಲ ವಾರದಲ್ಲಿ ₹ 1,210 ಕೋಟಿ ಹೂಡಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಆಗಸ್ಟ್‌ ತಿಂಗಳ ಮೊದಲ ವಾರದಲ್ಲಿ ದೇಶದ ಬಂಡವಾಳ ಮಾರುಕಟ್ಟೆಯಲ್ಲಿ ₹ 1,210 ಕೋಟಿ ಹೂಡಿಕೆ ಮಾಡಿದ್ದಾರೆ.

ಆಗಸ್ಟ್‌ 2 ರಿಂದ 6ರವರೆಗಿನ ಅವಧಿಯಲ್ಲಿ ಷೇರುಗಳ ಖರೀದಿಗೆ ₹ 975 ಕೋಟಿ ಹೂಡಿಕೆ ಮಾಡಿದ್ದು, ಸಾಲಪತ್ರಗಳ ಖರೀದಿಗೆ ₹ 235 ಕೋಟಿ ಹೂಡಿಕೆ ಮಾಡಿದ್ದಾರೆ. ಇದರಿಂದಾಗಿ ಒಟ್ಟಾರೆ ಹೂಡಿಕೆ ಮೊತ್ತವು ₹ 1,210 ಕೋಟಿಗಳಷ್ಟಾಗಿದೆ.

ಜುಲೈನಲ್ಲಿ ₹ 7,273 ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದರು.

ಕೋವಿಡ್‌ನ ಮೂರನೇ ಅಲೆಯು ಜಾಗತಿಕ ಮಾರುಕಟ್ಟೆಯ ಮೇಲೆ ಪರಿಣಾಮ ಉಂಟುಮಾಡಿದ್ದರು ಸಹ ದೇಶಿ ಮಟ್ಟದಲ್ಲಿ ತಯಾರಿಕಾ ವಲಯದ ಚೇತರಿಕೆ, ತಗ್ಗಿದ ನಿರುದ್ಯೋಗ ಪ್ರಮಾಣ ಹಾಗೂ ಜಿಎಸ್‌ಟಿ ಸಂಗ್ರಹದಲ್ಲಿ ಹೆಚ್ಚಳದಂತಹ ಸಕಾರಾತ್ಮಕ ಅಂಶಗಳು ಹೂಡಿಕೆಗೆ ಉತ್ತೇಜನ ನೀಡಿವೆ ಎಂದು ಕೋಟಕ್‌ ಸೆಕ್ಯುರಿಟೀಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಶ್ರೀಕಾಂತ್‌ ಚೌಹಾಣ್‌ ಹೇಳಿದ್ದಾರೆ.

ಕಚ್ಚಾತೈಲ ದರ ಏರಿಕೆ, ಅಮೆರಿಕದ ಡಾಲರ್‌ ಮೌಲ್ಯ ಸ್ಥಿರವಾಗಿರುವುದು ವಿದೇಶಿ ಹೂಡಿಕೆದಾರರನ್ನು ಭಾರತದ ಷೇರುಪೇಟೆಗಳಿಂದ ತುಸು ದೂರ ಇಡುವಂತಾಗಿದೆ. ಷೇರುಪೇಟೆಯು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ವಹಿವಾಟು ನಡೆಸುತ್ತಿರುವುದರಿಂದ ಆಗಾಗ್ಗೆ ಲಾಭಗಳಿಕೆಯ ವಹಿವಾಟನ್ನೂ ಅವರು ನಡೆಸುತ್ತಿದ್ದಾರೆ ಎಂದು ಮಾರ್ನಿಂಗ್‌ಸ್ಟಾರ್‌ ಇಂಡಿಯಾದ ಸಹಾಯಕ ನಿರ್ದೇಶಕ ಹಿಮಾಂಶು ಶ್ರೀವಾಸ್ತವ ತಿಳಿಸಿದ್ದಾರೆ.

ದೀರ್ಘಾವಧಿಯ ದೃಷ್ಟಿಯಿಂದ ಭಾರತವು ಬಂಡವಾಳ ಆಕರ್ಷಣೆಯ ಪ್ರಮುಖ ತಾಣವಾಗಿಯೇ ಮುಂದುವರಿಯಲಿದೆ. ಆರ್ಥಿಕತೆಯು ಚೇತರಿಕೆಯ ಹಾದಿಗೆ ಮರಳಿದ ಬಳಿಕ ವಿದೇಶಿ ಬಂಡವಾಳ ಹೂಡಿಕೆಯು ಸುಧಾರಿಸಬಹುದು. ಹೀಗಿದ್ದರೂ ಮೂರನೇ ಅಲೆಯು  ಹೂಡಿಕೆಯ ಮೇಲೆ ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು