ಮಂಗಳವಾರ, ಜೂನ್ 22, 2021
23 °C

ಕೋವಿಡ್‌ ಹೆಚ್ಚಳ: ₹ 5,936 ಕೋಟಿ ಎಫ್‌ಪಿಐ ಹೊರಹರಿವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌–19 ಸಾಂಕ್ರಾಮಿಕ ತೀವ್ರವಾಗಿ ಹರಡುತ್ತಿರುವುದು ಹಾಗೂ ಅದರಿಂದ ಆರ್ಥಿಕತೆಯ ಮೇಲೆ ಆಗಲಿರುವ ಪರಿಣಾಮಗಳು ಹೂಡಿಕೆದಾರರನ್ನು ಆತಂಕಕ್ಕೆ ದೂಡಿವೆ. ಇದರಿಂದಾಗಿ ಮೇ ತಿಂಗಳ ಮೊದಲ ವಾರದಲ್ಲಿ ಷೇರುಪೇಟೆಯಿಂದ ₹ 5,936 ಕೋಟಿ ಬಂಡವಾಳವನ್ನು ವಿದೇಶಿ ಹೂಡಿಕೆದಾರರು (ಎಫ್‌ಪಿಐ) ಹಿಂದಕ್ಕೆ ಪಡೆದಿದ್ದಾರೆ.

ವಿದೇಶಿ ಹೂಡಿಕೆದಾರರು ಏಪ್ರಿಲ್‌ನಲ್ಲಿ ₹ 9,659 ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದರು. ಅದಕ್ಕೂ ಹಿಂದೆ ಸತತ ಆರು ತಿಂಗಳವರೆಗೆ ಬಂಡವಾಳ ಹೂಡಿಕೆಗೆ ಗಮನ ನೀಡಿದ್ದರು.

ಇತ್ತೀಚಿನ ಬಂಡವಾಳ ಹೊರಹರಿವಿಗೆ ಲಾಭಗಳಿಕೆ ಉದ್ದೇಶದ ವಹಿವಾಟು ಕೂಡ ಒಂದು ಕಾರಣವಾಗಿರಬಹುದು ಎಂದು ಗ್ರೋವ್‌ ಸಂಸ್ಥೆಯ ಸಹ ಸ್ಥಾಪಕ ಹರ್ಷ್ ಜೈನ್‌ ಹೇಳಿದ್ದಾರೆ.

ಈ ವರ್ಷದಲ್ಲಿ ಇದುವರೆಗೆ ವಿದೇಶಿ ಹೂಡಿಕೆದಾರರು ₹ 40,146 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದರೆ, ₹ 15,547 ಕೋಟಿ ಮೌಲ್ಯದ ಸಾಲಪತ್ರಗಳನ್ನು ಮಾರಾಟ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು