ಮತ್ತೆ ಹೆಚ್ಚಾಯಿತು ಪೆಟ್ರೋಲ್‌ ಬೆಲೆ

7

ಮತ್ತೆ ಹೆಚ್ಚಾಯಿತು ಪೆಟ್ರೋಲ್‌ ಬೆಲೆ

Published:
Updated:

ಬೆಂಗಳೂರು: ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿಮೆ ಮಾಡಿದ ನಂತರ ಇಳಿಕೆಯ ಹಾದಿ ಹಿಡಿದಿದ್ದ ತೈಲ ಬೆಲೆ ಸತತ ಐದು ದಿನಗಳಿಂದ ಮತ್ತೆ ಏರುಮುಖ ಮಾಡಿದೆ. ಸೋಮವಾರ ಪೆಟ್ರೋಲ್‌ ದರ 37–40 ಪೈಸೆ ಹಾಗೂ ಡೀಸೆಲ್‌ ದರ 49–53 ಪೈಸೆ ಹೆಚ್ಚಾಗಿದೆ. 

ಜ.6 ರಿಂದ 14ರವರೆಗೆ ಪೆಟ್ರೋಲ್‌ ಬೆಲೆ ₹2 ಮತ್ತು ಡೀಸೆಲ್‌ ₹2.07ರಂತೆ ತುಟ್ಟಿಯಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ದರ ಏರುತ್ತಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ದೆಹಲಿಯಲ್ಲಿ ಜನವರಿ 9ರಂದು ₹68.50 ಇದ್ದ ಪೆಟ್ರೋಲ್‌ ಬೆಲೆ ಈಗ 70ರ ಗಡಿ ದಾಟಿದೆ. ಸೋಮವಾರ (ಜ.14) ದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ಗೆ ₹70.13 ಹಾಗೂ ಡೀಸೆಲ್ ಬೆಲೆಯಲ್ಲಿ 49 ಪೈಸೆ ಏರಿಕೆಯಾಗಿದ್ದು ₹64.18 ಇದೆ. 

ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಪ್ರತಿ ಲೀಟರ್‌ಗೆ ಭಾನುವಾರ 51 ಪೈಸೆ ಹೆಚ್ಚಾಗಿ ₹72.04 ಮತ್ತು ಡೀಸೆಲ್‌ 61 ಪೈಸೆ ಹೆಚ್ಚಾಗಿ ₹65.78ಕ್ಕೆ ತಲುಪಿದೆ

  ದೆಹಲಿ  ಮುಂಬೈ  ಬೆಂಗಳೂರು
ಜನವರಿ 14 ₹70.13 ₹ 75.77 ₹72.44
ಜನವರಿ 13 ₹ 69.75 ₹75.39 ₹72.04

 

ಬರಹ ಇಷ್ಟವಾಯಿತೆ?

 • 3

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !