ನವದೆಹಲಿ : ವಿಸ್ತಾರಾ ಕಂಪನಿಯು ವಿಲೀನಗೊಂಡ ಬಳಿಕ ಏರ್ ಇಂಡಿಯಾ ಹೆಸರಿನಲ್ಲಿಯೇ ಪೂರ್ಣ ಪ್ರಮಾಣದ ವಿಮಾನಯಾನ ಸೇವೆಯು ಮುಂದುವರಿಯಲಿದೆ ಎಂದು ಏರ್ ಇಂಡಿಯಾ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ ಸೋಮವಾರ ತಿಳಿಸಿದ್ದಾರೆ.
ಹೀಗಿದ್ದರೂ, ವಿಸ್ತಾರಾದಲ್ಲಿ ಇರುವ ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ಉಳಿಸಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಸಮೂಹದಲ್ಲಿ ಒಂದು ಪೂರ್ಣ ಪ್ರಮಾಣದ ಸೇವೆಗಳನ್ನು ನೀಡುವ ವಿಮಾನ ಮತ್ತು ಅಗ್ಗದ ದರದಲ್ಲಿ ಸೇವೆಗಳನ್ನು ಒದಗಿಸುವ ಇನ್ನೊಂದು ವಿಮಾನಯಾನ ಕಂಪನಿ ಹೊಂದುವ ಉದ್ದೇಶ ಇದೆ. ಏರ್ ಇಂಡಿಯಾ ಮತ್ತು ವಿಸ್ತಾರಾ ವಿಲೀನದ ಬಳಿಕ ಪೂರ್ಣ ಪ್ರಮಾಣದ ಸೇವೆ ನೀಡುವ ವಿಮಾನ ಕಂಪನಿಯು ರಚನೆ ಆಗಲಿದೆ ಎಂದು ವಿವರಿಸಿದ್ದಾರೆ.
ದೇಶಿ ಮಾರುಕಟ್ಟೆಯಲ್ಲಿ ವಿಸ್ತಾರಾ ಹೆಚ್ಚು ಗುರುತಿಸಿಕೊಂಡಿದೆ. ಆದರೆ, ಜಾಗತಿಕ ಮಾರುಕಟ್ಟೆಯನ್ನು ಗಮನಿಸುವುದಾದರೆ, ಅಲ್ಲಿ ಏರ್ ಇಂಡಿಯಾ ಹೆಚ್ಚು ಜನಪ್ರಿಯವಾಗಿದ್ದು, 90 ವರ್ಷಗಳ ಇತಿಹಾಸ ಹೊಂದಿದೆ ಎಂದು ವಿಲ್ಸನ್ ಹೇಳಿದ್ದಾರೆ.
ವಿಸ್ತಾರಾವನ್ನು ಏರ್ ಇಂಡಿಯಾದೊಂದಿಗೆ ವಿಲೀನ ಮಾಡುವ ಕುರಿತು ಭಾರತೀಯ ಸ್ಪರ್ಧಾ ಆಯೋಗದ (ಸಿಸಿಐ) ಒಪ್ಪಿಗೆ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.