ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಲಯನ್ಸ್ ಜೊತೆಗಿನ ಒಪ್ಪಂದ: ‘ಫ್ಯೂಚರ್‌’ಗೆ ಸಾಲ ಕೊಟ್ಟವರ ವಿರೋಧ

Last Updated 22 ಏಪ್ರಿಲ್ 2022, 16:24 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಫ್ಯೂಚರ್ ರಿಟೇಲ್ ಲಿಮಿಟೆಡ್‌ಗೆ ಅಡಮಾನ ಸಾಲ ನೀಡಿದವರ ಪೈಕಿ ಬಹುತೇಕರು, ಕಂಪನಿಯು ರಿಲಯನ್ಸ್‌ ರಿಟೇಲ್ ಜೊತೆ ಮಾಡಿಕೊಂಡಿರುವ ₹24,713 ಕೋಟಿ ಮೌಲ್ಯದ ಒಪ್ಪಂದವನ್ನು ತಿರಸ್ಕರಿಸಿದ್ದಾರೆ.

ಆದರೆ, ಫ್ಯೂಚರ್‌ ರಿಟೇಲ್‌ನ ಷೇರುದಾರರು ಹಾಗೂ ಅಡಮಾನ ಇಲ್ಲದೆ ಸಾಲ ನೀಡಿದವರ ಪೈಕಿ ತಲಾ ಶೇಕಡ 75ಕ್ಕಿಂತ ಹೆಚ್ಚಿನವರು ಈ ಒಪ್ಪಂದಕ್ಕೆ ಅನುಮೋದನೆ ನೀಡಿದ್ದಾರೆ. ಅಡಮಾನ ಸಾಲ ನೀಡಿರುವ ಶೇ 75ಕ್ಕಿಂತ ಹೆಚ್ಚಿನವರ ಒಪ್ಪಿಗೆ ಪಡೆಯಲು ಫ್ಯೂಚರ್ ರಿಟೇಲ್‌ಗೆ ಸಾಧ್ಯವಾಗಿಲ್ಲ.

ಅಡಮಾನ ಸಾಲ ಕೊಟ್ಟವರ ಪೈಕಿ ಶೇ 69.29ರಷ್ಟು ಜನ ಒಪ್ಪಂದವನ್ನು ತಿರಸ್ಕರಿಸಿದ್ದಾರೆ. ಶೇ 30.71ರಷ್ಟು ಜನ ಒಪ್ಪಿದ್ದಾರೆ ಎಂದು ಫ್ಯೂಚರ್ ರಿಟೇಲ್ ಲಿಮಿಟೆಡ್ ಷೇರುಪೇಟೆಗೆ ಮಾಹಿತಿ ನೀಡಿದೆ.

ರಿಲಯನ್ಸ್ ಜೊತೆಗಿನ ಒಪ್ಪಂದಕ್ಕೆ ಫ್ಯೂಚರ್ ಸಮೂಹದ ಅಂಗಸಂಸ್ಥೆಯಾಗಿರುವ ಫ್ಯೂಚರ್ ಲೈಫ್‌ಸ್ಟೈಲ್ ಫ್ಯಾಷನ್ ಲಿಮಿಟೆಡ್‌ಗೆ ಕೂಡ ಅಡಮಾನ ಸಾಲ ನೀಡಿದ ಬಹುತೇಕರಿಂದ ಒಪ್ಪಿಗೆ ಪಡೆಯಲು ಸಾಧ್ಯವಾಗಿಲ್ಲ.

ಫ್ಯೂಚರ್ ಸಮೂಹವು ತನ್ನ ರಿಟೇಲ್, ಸಗಟು, ಸರಕು ಸಾಗಣೆ ವಲಯಗಳಲ್ಲಿನ ಒಟ್ಟು 19 ಕಂಪನಿಗಳನ್ನು ರಿಲಯನ್ಸ್ ರಿಟೇಲ್ ವೆಂಚರ್ಸ್‌ ಲಿಮಿಟೆಡ್‌ಗೆ ಮಾರಾಟ ಮಾಡುವ ಘೋಷಣೆಯನ್ನು 2020ರ ಆಗಸ್ಟ್‌ನಲ್ಲಿ ಮಾಡಿತು. ಆದರೆ ಇದಕ್ಕೆ ಅಮೆಜಾನ್ ವಿರೋಧ ವ್ಯಕ್ತಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT