ನವದೆಹಲಿ: ರೇಮಂಡ್ ಲೈಫ್ಸ್ಟೈಲ್ನ ಕಾರ್ಯ ನಿರ್ವಾಹಕ ಅಧ್ಯಕ್ಷರಾಗಿ ಗೌತಮ್ ಹರಿ ಸಿಂಘಾನಿಯಾ ನೇಮಕವಾಗಿದ್ದಾರೆ.

ಇತ್ತೀಚೆಗೆ ನಡೆದ ಕಂಪನಿಯ ಸಾಮಾನ್ಯ ವಾರ್ಷಿಕ ಸಭೆಯಲ್ಲಿ ಶೇ 86.85ರಷ್ಟು ಷೇರುದಾರರು ಗೌತಮ್ ಅವರ ನೇಮಕದ ಪರವಾಗಿ ಮತ ಚಲಾಯಿಸಿದ್ದಾರೆ.

ಅಲ್ಲದೆ, ಸ್ವತಂತ್ರ ನಿರ್ದೇಶಕರು ಮತ್ತು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಸುನಿಲ್ ಕಟಾರಿಯಾ ಅವರ ನೇಮಕ ಸೇರಿ ಎಂಟು ವಿಶೇಷ ನಿರ್ಣಯಗಳಿಗೆ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಕಂಪನಿ ಕಾಯ್ದೆ 2013ರ ಅನ್ವಯ ವಿಶೇಷ ನಿರ್ಣಯಗಳಿಗೆ ಕನಿಷ್ಠ ಶೇ 75ರಷ್ಟು ಸದಸ್ಯರು ಒಪ್ಪಿಗೆ ನೀಡುವುದು ಕಡ್ಡಾಯವಾಗಿದೆ.

ರೇಮಂಡ್ ಲಿಮಿಟೆಡ್ನಿಂದ ವಿಭಜನೆಗೊಂಡಿರುವ ರೇಮಂಡ್ ಲೈಫ್ಸ್ಟೈಲ್ ಸೆಪ್ಟೆಂಬರ್ 5ರಂದು ಷೇರುಪೇಟೆಯಲ್ಲಿ ಲಿಸ್ಟಿಂಗ್ ಆಗಿದೆ. ಈ ಎರಡು ಕಂಪನಿಗಳಿಗೆ ಗೌತಮ್ ಸಿಂಘಾನಿಯಾ ಅವರೇ ಮುಖ್ಯಸ್ಥರಾಗಿದ್ದಾರೆ.

ಪ್ರವರ್ತಕ ಸಿಂಘಾನಿಯಾ ಕುಟುಂಬ ಮತ್ತು ಅವರ ಅಂಗಸಂಸ್ಥೆಗಳು ರೇಮಂಡ್ ಲೈಫ್ಸ್ಟೈಲ್ನಲ್ಲಿ ಶೇ 54.68ರಷ್ಟು ಷೇರುಗಳ ಮೇಲೆ ಒಡೆತನ ಹೊಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.