ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಡಿಪಿ ವೃದ್ಧಿ ಕುಂಠಿತ ನಿರೀಕ್ಷೆ

Last Updated 26 ನವೆಂಬರ್ 2018, 20:15 IST
ಅಕ್ಷರ ಗಾತ್ರ

ನವದೆಹಲಿ: ಸೆಪ್ಟೆಂಬರ್‌ ತಿಂಗಳಿಗೆ ಕೊನೆಗೊಂಡಿರುವ ದ್ವಿತೀಯ ತ್ರೈಮಾಸಿಕದಲ್ಲಿ, ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಬೆಳವಣಿಗೆ ಪ್ರಮಾಣವು ಕಡಿಮೆ ಇರಲಿದೆ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಸಂಶೋಧನಾ ವರದಿ ಅಂದಾಜಿಸಿದೆ.

ಗ್ರಾಮೀಣ ಪ್ರದೇಶದಲ್ಲಿನ ಬೇಡಿಕೆ ಕುಂಠಿತಗೊಂಡಿರುವುದು ಜಿಡಿಪಿ ವೃದ್ಧಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ತೆರಿಗೆ ಸಂಗ್ರಹದ ಆಧಾರದ ಮೇಲೆ ಜಿಡಿಪಿ ವೃದ್ಧಿಯು ಶೇ 7.5 ರಿಂದ ಶೇ 7.6ರವರೆಗೆ ಇರಲಿದೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ವಾಣಿಜ್ಯ ವಾಹನಗಳ ಮಾರಾಟ, ದೇಶಿ ವಿಮಾನ ಪ್ರಯಾಣಿಕರ ಸಂಚಾರ, ಸಿಮೆಂಟ್‌ ಉತ್ಪಾದನೆಯು ಎರಡಂಕಿಯ ಬೆಳವಣಿಗೆ ಕಂಡಿವೆ. ಆದರೆ, ಆಹಾರಯೇತರ ಸಾಲ ವಿತರಣೆ, ಬ್ಯಾಂಕ್‌ ಠೇವಣಿ ಮತ್ತು ಪ್ರಯಾಣಿಕರ ವಾಹನ ಮಾರಾಟವು ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಕಡಿಮೆಯಾಗಿದೆ.

ಈ ಅವಧಿಯಲ್ಲಿ ಸರ್ಕಾರದ ವೆಚ್ಚವೂ ಕಡಿಮೆಯಾಗಿದೆ. ಹೀಗಾಗಿ ಅಭಿವೃದ್ಧಿಗೆ ಬೇಕಾಗಿದ್ದ ವಿತ್ತೀಯ ಉತ್ತೇಜನ ಕಂಡು ಬರುತ್ತಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

2018–19ನೇ ಹಣಕಾಸು ವರ್ಷದ ಏಪ್ರಿಲ್‌ –ಜೂನ್‌ ಅವಧಿಯ ಮೊದಲ ತ್ರೈಮಾಸಿಕದಲ್ಲಿ ಸ್ಥಿರ ಬೆಲೆ (2011–12) ಮಟ್ಟದಲ್ಲಿನ ‘ಜಿಡಿಪಿ’ ಬೆಳವಣಿಗೆಯು ಶೇ 8.2ರಷ್ಟಿತ್ತು.

ಕೇಂದ್ರೀಯ ಸಾಂಖ್ಯಿಕ ಕಚೇರಿಯು (ಸಿಎಸ್‌ಒ) ದ್ವಿತೀಯ ತ್ರೈಮಾಸಿಕದ ಹಣಕಾಸು ಸಾಧನೆಯನ್ನು ಶುಕ್ರವಾರ ಪ್ರಕಟಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT