ಮುಂಬೈ: ರತ್ನಗಳು ಮತ್ತು ಚಿನ್ನಾಭರಣಗಳ ರಫ್ತು ಪ್ರಮಾಣ 2020ರ ಸೆಪ್ಟೆಂಬರ್‌ಗೆ ಹೋಲಿಸಿದರೆ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಶೇ 29ರಷ್ಟು ಏರಿಕೆ ಕಂಡಿದೆ. ಮೌಲ್ಯದ ಲೆಕ್ಕದಲ್ಲಿ ₹ 17,937 ಕೋಟಿಗಳಿಂದ ₹ 23,260 ಕೋಟಿಗಳಿಗೆ ಏರಿಕೆ ಆಗಿದೆ ಎಂದು ರತ್ನಗಳು ಮತ್ತು ಚಿನ್ನಾಭರಣ ರಫ್ತು ಉತ್ತೇಜನ ಮಂಡಳಿ (ಜಿಜೆಇಪಿಸಿ) ಶನಿವಾರ ತಿಳಿಸಿದೆ.

2020ರ ಏಪ್ರಿಲ್–ಸೆಪ್ಟೆಂಬರ್ ಅವಧಿಗೆ ಹೋಲಿಸಿದರೆ ಈ ವರ್ಷದ ಏಪ್ರಿಲ್–ಸೆಪ್ಟೆಂಬರ್ ಅವಧಿಯಲ್ಲಿ ರಫ್ತು ಶೇ 134ರಷ್ಟು ಹೆಚ್ಚಾಗಿದ್ದು ₹ 1.40 ಲಕ್ಷ ಕೋಟಿಗಳಿಗೆ ತಲುಪಿದೆ. ಈ ಮೂಲಕ ಕೇಂದ್ರ ಸರ್ಕಾರವು ನಿಗದಿ ಮಾಡಿರುವ ರಫ್ತು ಗುರಿಯ ಶೇ 46ರಷ್ಟು ಸಾಧನೆ ಆಗಿದೆ ಎಂದು ಅದು ಹೇಳಿದೆ. ಒಟ್ಟಾರೆ ₹ 3.08 ಲಕ್ಷ ಕೋಟಿ ರಫ್ತು ಗುರಿಯನ್ನು ಸರ್ಕಾರ ಹೊಂದಿದೆ.

ಮಾರುಕಟ್ಟೆಗಳು ತೆರೆಯುತ್ತಿರುವುದರಿಂದ ಹಾಗೂ ಬೇಡಿಕೆಯು ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿರುವುದರಿಂದ ಉದ್ಯಮದಲ್ಲಿ ಸಕಾರಾತ್ಮಕ ವಾತಾವರಣ ಇದೆ ಎಂದು ಮಂಡಳಿಯ ಅಧ್ಯಕ್ಷ ಕೋಲಿನ್ ಶಾ ಹೇಳಿದ್ದಾರೆ.

ಚಿನ್ನದ ಆಭರಣಗಳ ರಫ್ತು ಏಪ್ರಿಲ್–ಸೆಪ್ಟೆಂಬರ್ ಅವಧಿಯಲ್ಲಿ ₹ 8,109 ಕೋಟಿಗಳಿಂದ ₹ 29,379 ಕೋಟಿಗಳಿಗೆ ಶೇ 262ರಷ್ಟು ಹೆಚ್ಚಾಗಿದೆ. ಬೆಳ್ಳಿ ಆಭರಣಗಳ ರಫ್ತು ₹ 6,392 ಕೋಟಿಗಳಿಂದ ₹ 9,477 ಕೋಟಿಗಳಿಗೆ ಶೇ 48ರಷ್ಟು ಹೆಚ್ಚಾಗಿದೆ ಎಂದು ಮಂಡಳಿಯು ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.