ಮುಂಬೈ: ದೇಶಿ ಅಗ್ಗದ ವಿಮಾನ ಯಾನ ಸಂಸ್ಥೆ ಗೋಏರ್, ದರ ಕಡಿತದ ಅತಿದೊಡ್ಡ ಕೊಡುಗೆ ಪ್ರಕಟಿಸಿದೆ.

₹ 899 ರಿಂದ ಆರಂಭವಾಗುವ ರಿಯಾಯ್ತಿ ದರದ ಈ ಕೊಡುಗೆಯಡಿ ಟಿಕೆಟ್‌ಗಳನ್ನು ಇದೇ 27ರಿಂದ ಮುಂಗಡ ಕಾದಿರಿಸಬಹುದು. ಮೂರು ದಿನಗಳವರೆಗೆ ಈ ಕೊಡುಗೆ ಜಾರಿಯಲ್ಲಿ ಇರಲಿದೆ. ಈ ವರ್ಷದ ಜೂನ್ 15ರಿಂದ ಡಿಸೆಂಬರ್ 31ರವರೆಗೆ ವಿವಿಧ ನಗರಗಳಿಗೆ ಪ್ರಯಾಣಿಸಲು ಟಿಕೆಟ್ ಕಾದಿರಿಸಬಹುದು.ಈ ಮಾರಾಟ ಕೊಡುಗೆಯಲ್ಲಿ ಪ್ರಯಾಣಿಕರು ತಮ್ಮ ಪ್ರಯಾಣ ದಿನ, ವೇಳೆಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಹೊಂದಿದ್ದಾರೆ.

‘ವಿಮಾನ ಪ್ರಯಾಣ ದರ ದುಬಾರಿಯಾಗುತ್ತಿದೆ ಎನ್ನುವ ಆಕ್ಷೇಪ ಕೇಳಿ ಬರುತ್ತಿರುವಾಗಲೇ, ₹ 899 ರಿಂದ ಟಿಕೆಟ್ ದರ ಆರಂಭವಾಗುವ ಈ ವಿಶೇಷ ಕೊಡುಗೆ ಪ್ರಕಟಿಸಲಾಗುತ್ತಿದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜೆಹ್ ವಾಡಿಯಾ ಹೇಳಿದ್ದಾರೆ.

ವಿಶೇಷ ಕಡಿತ: ಪೇಟಿಎಂ ವಾಲೆಟ್ ಮೂಲಕ ಕನಿಷ್ಠ ₹ 2,499 ಮೊತ್ತದ ಟಿಕೆಟ್ ಕಾದಿರಿಸಿದವರಿಗೆ ₹ 500ವರೆಗೆ ನಗದು ವಾಪಸ್, ಮಿಂತ್ರಾ ಆ್ಯಪ್ ಅಥವಾ ಅಂತರ್ಜಾಲ ತಾಣದ ಮೂಲಕ ಕನಿಷ್ಠ ₹ 1,999 ವೆಚ್ಚ ಮಾಡಿ ಟಿಕೆಟ್ ಕಾದಿರಿಸಿದವರಿಗೆ ಶೇ 10ರಷ್ಟು ಕಡಿತ ಸೌಲಭ್ಯವು ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.