ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿಗೂ ಮುನ್ನ ಚಿನ್ನದ ಬಾಂಡ್‌ ಬಿಡುಗಡೆ; ಪ್ರತಿ ಗ್ರಾಂಗೆ ₹3,835

ಅಕ್ಟೋಬರ್‌ 25 ಕೊನೇ ದಿನ
Last Updated 21 ಅಕ್ಟೋಬರ್ 2019, 11:17 IST
ಅಕ್ಷರ ಗಾತ್ರ

ನವದೆಹಲಿ: ದೀಪಾವಳಿ ಹಬ್ಬಕ್ಕೆ ಚಿನ್ನ ಖರೀದಿ ಉತ್ಸಾಹದಲ್ಲಿರುವ ಜನರನ್ನು ಬಾಂಡ್‌ಗಳತ್ತ ಸೆಳೆಯಲು ಸರ್ಕಾರ 'ಚಿನ್ನದ ಬಾಂಡ್‌'ಯೋಜನೆಯಆರನೇ ಕಂತನ್ನು ಸೋಮವಾರ ಬಿಡುಗಡೆ ಮಾಡಿದೆ.

ಧನತ್ರಯೋದಶಿ(ದೀಪಾವಳಿ ಮೊದಲ ದಿನ) ಪ್ರಯುಕ್ತ ಜನರು ಚಿನ್ನ ಖರೀದಿಸುವ ರೂಢಿಯ ಸದ್ಬಳಕೆಗೆ ಸರ್ಕಾರ ಮುಂದಾಗಿದ್ದು, ಅಕ್ಟೋಬರ್‌ 25ರ ವರೆಗೂ ಬಾಂಡ್‌ಖರೀದಿಗೆ ಮನವಿ ಮಾಡಲು ಅವಕಾಶ ನೀಡಲಾಗಿದೆ.

ಹಣಕಾಸು ಸಚಿವಾಲಯದ ಪ್ರಕಟಣೆಯ ಪ್ರಕಾರ, ಬಾಂಡ್‌ ನೀಡಿಕೆ ಬೆಲೆಯನ್ನು ಸರ್ಕಾರ ಪ್ರತಿ ಗ್ರಾಂಗೆ ₹3,835 ನಿಗದಿ ಪಡಿಸಿದೆ. ಆನ್‌ಲೈನ್‌ ಮೂಲಕ ಬಾಂಡ್‌ ಖರೀದಿಗೆ ಮನವಿ ಮಾಡುವವರು ಹಾಗೂ ಖರೀದಿಗೆ ಡಿಜಿಟಲ್‌ ಪಾವತಿ ಮಾಡುವವರಿಗೆ ಪ್ರತಿ ಗಾಂ ಬೆಲೆಯ ಮೇಲೆ ₹50 ರಿಯಾಯಿತಿ ನೀಡಲು ನಿರ್ಧರಿಸಿದೆ. ‌ರಿಯಾಯಿತಿ ಪಡೆಯುವ ಹೂಡಿಕೆದಾರರಿಗೆ ಪ್ರತಿ ಗಾಂ ಬಾಂಡ್‌ಗೆ ₹3,785 ಬೆಲೆ ನಿಗದಿಯಾಗಿದೆ.

ಚಿನ್ನದ ಬಾಂಡ್‌ ವಿವರ

*₹3,835; ಪ್ರತಿ ಗ್ರಾಂ ಬೆಲೆ

*ಆನ್‌ಲೈನ್‌ ಮೂಲಕ ಖರೀದಿಗೆ ₹3,785

*1 ಗ್ರಾಂ; ಕನಿಷ್ಠ ಹೂಡಿಕೆ

*500 ಗ್ರಾಂ; ಗರಿಷ್ಠ ಹೂಡಿಕೆ

*4 ಕೆ.ಜಿ; ಹಿಂದೂ ಅವಿಭಕ್ತ ಕುಟುಂಬದ ಖರೀದಿ ಮಿತಿ

*20 ಕೆ.ಜಿ; ಟ್ರಸ್ಟ್‌ಗಳು ಖರೀದಿಸಬಹುದಾದ ಮಿತಿ

ಸಾರ್ವಜನಿಕರು ಚಿನ್ನವನ್ನು ಭೌತಿಕ ಸ್ವರೂಪದಲ್ಲಿ ತಮ್ಮ ಬಳಿ ಇಟ್ಟುಕೊಳ್ಳುವ ಪ್ರವೃತ್ತಿಗೆ ಕಡಿವಾಣ ಹಾಕಲು ಮತ್ತು ಉಳಿತಾಯದ ಹಣವನ್ನು ಚಿನ್ನದ ಬಾಂಡ್‌ಗಳಲ್ಲಿ ತೊಡಗಿಸಲು ಉತ್ತೇಜನ ನೀಡಲು 2015ರ ನವೆಂಬರ್‌ನಲ್ಲಿ ಚಿನ್ನದ ಬಾಂಡ್ ಯೋಜನೆ ಜಾರಿಗೆ ತರಲಾಯಿತು.

ಚಿನ್ನದ ಬಾಂಡ್‌ಗಳಲ್ಲಿ ಕನಿಷ್ಠ ಹೂಡಿಕೆಯು ಒಂದು ಗ್ರಾಂ ಆಗಿರುತ್ತದೆ. ವ್ಯಕ್ತಿಯೊಬ್ಬ ಒಂದು ವರ್ಷದ ಅವಧಿಯಲ್ಲಿ ಗರಿಷ್ಠ 500 ಗ್ರಾಂಗಳಷ್ಟು ಬಾಂಡ್‌ ಖರೀದಿಸಬಹುದಾಗಿದೆ. ಹಿಂದೂ ಅವಿಭಕ್ತ ಕುಟುಂಬದ ಖರೀದಿ ಮಿತಿ ಗರಿಷ್ಠ 4 ಕೆ.ಜಿ ಮತ್ತು ಟ್ರಸ್ಟ್‌ಗಳು 20 ಕೆ.ಜಿಯಷ್ಟು ಬಾಂಡ್‌ ಖರೀದಿಸಲು ಅವಕಾಶ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT