ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಕ್ವಿಟಿಯತ್ತ ಗಮನ: ಚಿನ್ನದ ಇಟಿಎಫ್‌ನಿಂದ ₹ 248 ಕೋಟಿ ಹೊರಹರಿವು

Last Updated 20 ಮಾರ್ಚ್ 2022, 13:28 IST
ಅಕ್ಷರ ಗಾತ್ರ

ನವದೆಹಲಿ: ಹೂಡಿಕೆದಾರರು ಈಕ್ವಿಟಿ ಫಂಡ್‌ಗಳಲ್ಲಿ ಹೂಡಿಕೆಗೆ ಹೆಚ್ಚಿನ ಗಮನ ನೀಡಿದ್ದರಿಂದ ಫೆಬ್ರುವರಿಯಲ್ಲಿ ಚಿನ್ನದ ವಿನಿಮಯ ವಹಿವಾಟು ನಿಧಿಗಳಿಂದ (ಇಟಿಎಫ್‌) ₹ 248 ಕೋಟಿ ಬಂಡವಾಳ ಹೊರಹರಿವು ಆಗಿದೆ.

ಜನವರಿಯಲ್ಲಿ ಚಿನ್ನದ ಇಟಿಎಫ್‌ಗಳಿಂದ ₹ 452 ಕೋಟಿ ಬಂಡವಾಳ ಹಿಂದಕ್ಕೆ ಪಡೆಯಲಾಗಿತ್ತು ಎಂದು ಭಾರತೀಯ ಮ್ಯೂಚುವಲ್ ಫಂಡ್‌ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ತಿಳಿಸಿದೆ.

ಬಂಡವಾಳ ಹೊರಹರಿವನ್ನು ಎರಡು ರೀತಿಯಲ್ಲಿ ಅರ್ಥಮಾಡಿಕೊಳ್ಳಬಹುದು ಎಂದು ಎಲ್‌ಎಕ್ಸ್‌ಎಂಇ ಸ್ಥಾಪಕಿ ಪ್ರೀತಿ ರಾಠಿ ಗುಪ್ತಾ ಹೇಳಿದ್ದಾರೆ. ಮೊದಲನೆಯದು, ಈಕ್ವಿಟಿ ಮಾರುಕಟ್ಟೆ ಗಳಿಕೆಯು ಆಕರ್ಷಕ ಆಗಿರುವುದರಿಂದ ಹೂಡಿಕೆದಾರರು ಚಿನ್ನದ ಇಟಿಎಫ್‌ ಬದಲಾಗಿ ಈಕ್ವಿಟಿಯಲ್ಲಿ ಬಂಡವಾಳ ತೊಡಗಿಸಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಇರುವ ಅಸ್ಥಿರತೆಯನ್ನು ಷೇರುಪೇಟೆ ಪ್ರವೇಶಿಸಲು ಒಂದು ಅವಕಾಶವಾಗಿಯೂ ಹೂಡಿಕೆದಾರರು ನೋಡುತ್ತಿದ್ದಾರೆ.

ಎರಡನೇಯದು, ಚಿನ್ನದ ಬೆಲೆ ಏರಿಕೆ ಆಗಿರುವುದರಿಂದ ಲಾಭ ಮಾಡಿಕೊಳ್ಳಲು ಹೂಡಿಕೆದಾರರು ಮುಂದಾದರು. ಹೀಗಾಗಿ ಚಿನ್ನದ ಇಟಿಎಫ್‌ನಿಂದ ಹೊರಬಂದು ಇತರೆ ಹೂಡಿಕೆ ವರ್ಗಗಗಳಲ್ಲಿ ತೊಡಗಿಸಿದರು ಎಂದು ಅವರು ವಿವರಿಸಿದ್ದಾರೆ.

ಚಿನ್ನದ ಇಟಿಎಫ್‌ನ ನಿರ್ವಹಣಾ ಸಂಪತ್ತು ಮೌಲ್ಯವು ಜನವರಿಯಲ್ಲಿ ₹ 17,839 ಕೋಟಿಷ್ಟು ಇದ್ದಿದ್ದು ಫೆಬ್ರುವರಿ ಅಂತ್ಯಕ್ಕೆ ₹ 18,727 ಕೋಟಿಗೆ ಏರಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT