ಬುಧವಾರ, ಸೆಪ್ಟೆಂಬರ್ 18, 2019
25 °C

ಚಿನ್ನದ ಬೆಲೆ ಗರಿಷ್ಠ ₹ 598 ಏರಿಕೆ

Published:
Updated:

ಮುಂಬೈ/ಬೆಂಗಳೂರು: ದೇಶದ ಚಿನಿವಾರ ಪೇಟೆಗಳಲ್ಲಿ ಚಿನ್ನದ ಧಾರಣೆಯು ಮಂಗಳವಾರದ ವಹಿವಾಟಿನಲ್ಲಿ ಪ್ರತಿ 10 ಗ್ರಾಂಗೆ ಗರಿಷ್ಠ ₹ 598ರಂತೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರ ₹ 598ರಂತೆ ಹೆಚ್ಚಾಗಿ ₹ 39,281ಕ್ಕೆ ತಲುಪಿದೆ. ಮುಂಬೈನಲ್ಲಿ ₹ 520ರಂತೆ ಏರಿಕೆಯಾಗಿ ₹ 38,969ಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲಿ ₹ 538ರಂತೆ ಹೆಚ್ಚಾಗಿ ₹ 38,987ಕ್ಕೆ ತಲುಪಿದೆ.

ಷೇರುಪೇಟೆಗಳು ನಕಾರಾತ್ಮಕ ಮಟ್ಟದಲ್ಲಿ ಇರುವುದರಿಂದ ಹೂಡಿಕೆದಾರರು ಚಿನ್ನ ಖರೀದಿಗೆ ಆಸಕ್ತಿ ತೋರಿಸುತ್ತಿದ್ದಾರೆ. ಇದು ಬೆಲೆ ಏರಿಕೆಗೆ ಕಾರಣವಾಗುತ್ತಿದೆ.

Post Comments (+)