ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ಬೆಲೆ ₹ 661ರಷ್ಟು ಇಳಿಕೆ

Last Updated 12 ಫೆಬ್ರುವರಿ 2021, 11:04 IST
ಅಕ್ಷರ ಗಾತ್ರ

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ ಶುಕ್ರವಾರ ₹ 661ರಷ್ಟು ಇಳಿಕೆ ಆಗಿದೆ. 10 ಗ್ರಾಂ ಚಿನ್ನವು ₹ 46,847ಕ್ಕೆ ಮಾರಾಟ ಆಗಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಕುಸಿತ ಕಂಡಿರುವುದು ಹಾಗೂ ಅಮೆರಿಕದ ಡಾಲರ್ ಎದುರು ರೂಪಾಯಿಯು ಮೌಲ್ಯ ಹೆಚ್ಚಿಸಿಕೊಂಡಿದ್ದು ಇದಕ್ಕೆ ಕಾರಣ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹೇಳಿದೆ.

ಗುರುವಾರದ ಕೊನೆಯಲ್ಲಿ ಚಿನ್ನದ ಬೆಲೆಯು ₹ 47,508 ಆಗಿತ್ತು. ಬೆಳ್ಳಿಯ ಬೆಲೆಯಲ್ಲಿ ಕೂಡ ಇಳಿಕೆ ಕಂಡುಬಂದಿದೆ. ಕೆ.ಜಿ. ಬೆಳ್ಳಿಯ ಧಾರಣೆಯು ₹ 347ರಷ್ಟು ಇಳಿಕೆಯಾಗಿ, ₹ 67,894ಕ್ಕೆ ಮಾರಾಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT