ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಸೋಮವಾರ ಚಿನ್ನದ ದರ ಏರಿಕೆಯಾಗಿದ್ದರೆ, ಬೆಳ್ಳಿ ಧಾರಣೆ ಇಳಿಕೆಯಾಗಿದೆ.
ಬೆಳ್ಳಿ ಕೆ.ಜಿಗೆ ₹1,300 ಕಡಿಮೆಯಾಗಿ ₹84,200ರಂತೆ ಮಾರಾಟವಾಗಿದೆ. ಚಿನ್ನದ ದರವು 10 ಗ್ರಾಂ ಗೆ ₹250 ಏರಿಕೆಯಾಗಿ, ₹72,800ಕ್ಕೆ ಮುಟ್ಟಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಒಂದು ಔನ್ಸ್ಗೆ (28.34 ಗ್ರಾಂ) ಕ್ರಮವಾಗಿ 2,461 ಡಾಲರ್ (ಅಂದಾಜು ₹2.06 ಲಕ್ಷ) ಮತ್ತು 27 ಡಾಲರ್ನಂತೆ (ಅಂದಾಜು ₹2,307) ಮಾರಾಟವಾಗಿವೆ.