ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಬ್ರಿಡ್‌ ವರ್ಕ್‌ ವ್ಯವಸ್ಥೆಯತ್ತ ಗೂಗಲ್‌

Last Updated 6 ಮೇ 2021, 13:59 IST
ಅಕ್ಷರ ಗಾತ್ರ

ನವದೆಹಲಿ: ವಾರದಲ್ಲಿ ಮೂರು ದಿನ ಕಚೇರಿಯಿಂದ ಕೆಲಸ, ಇನ್ನುಳಿದ ಎರಡು ದಿನ ಉದ್ಯೋಗಿಗೆ ಸೂಕ್ತ ಅನ್ನಿಸುವ ಜಾಗದಿಂದ ಕೆಲಸ ನಿಭಾಯಿಸುವ ಹೈಬ್ರಿಡ್‌ ವ್ಯವಸ್ಥೆಯನ್ನು ಜಾರಿಗೆ ತರಲು ಗೂಗಲ್‌ ಕಂಪನಿ ಮುಂದಾಗಿದೆ. ಗೂಗಲ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಸುಂದರ್‌ ಪಿಚೈ ಈ ಮಾಹಿತಿ ನೀಡಿದ್ದಾರೆ.

ಈ ವರ್ಷದ ಕೊನೆಯಲ್ಲಿ ಗೂಗಲ್‌ ಕಂಪನಿಯು ಕಚೇರಿಗಳು ಮತ್ತೆ ಆರಂಭವಾದ ಬಳಿಕ, ಶೇಕಡ 20ರಷ್ಟು ಉದ್ಯೋಗಿಗಳು ಕಚೇರಿಯಿಂದ ಹೊರಗಿದ್ದು ಕೆಲಸ ಮಾಡಲಿದ್ದಾರೆ. ಶೇ 60ರಷ್ಟು ಉದ್ಯೋಗಿಗಳು ವಾರದಲ್ಲಿ ಕೆಲವು ದಿನ ಕಚೇರಿಗೆ ಬಂದು ಕೆಲಸ ಮಾಡಲಿದ್ದಾರೆ ಎಂದು ಪಿಚೈ ತಿಳಿಸಿದ್ದಾರೆ.

ಉದ್ಯೋಗಿಗಳಿಗೆ ಅವರ ಕೆಲಸದ ಸ್ವರೂಪದ, ಅವರು ಕೆಲಸ ಮಾಡುವ ಗುಂಪಿನ ಅಗತ್ಯಗಳ ಆಧಾರದ ಮೇಲೆ ಕಚೇರಿಗೆ ಬಾರದೆಯೇ ಕೆಲಸ ಮಾಡಲು ಅರ್ಜಿ ಸಲ್ಲಿಸುವ ಅವಕಾಶವನ್ನೂ ಕಂಪನಿ ನೀಡುತ್ತದೆ ಎಂದೂ ಅವರು ಹೇಳಿದ್ದಾರೆ.

2021ರ ಮೊದಲ ತ್ರೈಮಾಸಿಕದ ಹಣಕಾಸು ವರದಿಯ ಪ್ರಕಾರ, ಗೂಗಲ್‌ನಲ್ಲಿ ಒಟ್ಟಾರೆ 1.39 ಲಕ್ಷ ಉದ್ಯೋಗಿಗಳಿದ್ದಾರೆ. ಭಾರತದಲ್ಲಿ ಕಂಪನಿಯ ನಾಲ್ಕು ಸಾವಿರ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ ಎಂಬ ಅಂದಾಜು ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT