ಲಕ್ಷ್ಮೀ ವಿಲಾಸ್ ಬ್ಯಾಂಕ್ ವಿಲೀನಕ್ಕೆ ಕೇಂದ್ರ ಅಸ್ತು: ನಿರ್ಬಂಧ ತೆರವು

ನವದೆಹಲಿ: ಲಕ್ಷ್ಮೀ ವಿಲಾಸ್ ಬ್ಯಾಂಕ್ಅನ್ನು (ಎಲ್ವಿಬಿ) ಸಿಂಗಪುರ ಮೂಲದ ಡಿಬಿಎಸ್ ಬ್ಯಾಂಕ್ ಜೊತೆ ವಿಲೀನ ಮಾಡುವ ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಹೀಗಾಗಿ ಬ್ಯಾಂಕ್ ಖಾತೆದಾರರಿಗೆ ಹಣ ಹಿಂಪಡೆಯಲು ವಿಧಿಸಲಾಗಿದ್ದ ನಿರ್ಬಂಧ ತೆರವಾಗಿದೆ.
ಎಲ್ವಿಬಿ ಹಾಗೂ ಡಿಬಿಎಸ್ ವಿಲೀನಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವ ಪ್ರಕಾಶ್ ಜಾವಡೇಕರ್ ವರದಿಗಾರರಿಗೆ ತಿಳಿಸಿದ್ದಾರೆ. ಇದರಿಂದ 20 ಲಕ್ಷ ಖಾತೆದಾರರಿಗೆ ಮತ್ತು 4,000 ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಎಲ್ವಿಬಿ ವಿಲೀನ: ಈ ವಾರ ಪ್ರಕಟ?
‘ಎಲ್ವಿಬಿ ಹಾಗೂ ಡಿಬಿಎಸ್ ವಿಲೀನಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಹೀಗಾಗಿ ಖಾತೆದಾರರು ಹಣ ಹಿಂಪಡೆಯಲು ಯಾವುದೇ ನಿರ್ಬಂಧ ಇರುವುದಿಲ್ಲ’ ಎಂದು ಅಧಿಕೃತ ವಕ್ತಾರರು ಟ್ವೀಟ್ ಮಾಡಿದ್ದಾರೆ.
ಬ್ಯಾಂಕ್ ಮೇಲೆ ನವೆಂಬರ್ 17ರಂದು ತಾತ್ಕಾಲಿಕ ನಿಷೇಧ ಹೇರಿದ್ದ ಸರ್ಕಾರವು ಖಾತೆದಾರರಿಗೆ ಹಣ ಹಿಂಪಡೆಯಲು ಗರಿಷ್ಠ ₹25,000 ಮಿತಿ ನಿಗದಿಪಡಿಸಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ಸಲಹೆ ಮೇರೆಗೆ ಸರ್ಕಾರ ಈ ನಿರ್ಧಾರ ಕೈಗೊಂಡಿತ್ತು.
ಕರ್ನಾಟಕದಲ್ಲಿ 60 ಶಾಖೆಗಳು: ಎಲ್ವಿಬಿ ವೆಬ್ಸೈಟ್ನಲ್ಲಿ ಇರುವ ಮಾಹಿತಿ ಅನ್ವಯ, ಬ್ಯಾಂಕಿನ ಅರವತ್ತು ಶಾಖೆಗಳು ಕರ್ನಾಟಕದಲ್ಲಿ ಇವೆ. 2017ರ ಜುಲೈನಲ್ಲಿ ₹ 190ರಷ್ಟಿದ್ದ ಈ ಬ್ಯಾಂಕಿನ ಷೇರು ಮೌಲ್ಯವು ಈಗ ₹ 15.50ಕ್ಕೆ ಕುಸಿತ ಕಂಡಿದೆ.
ಇದನ್ನೂ ಓದಿ: ಲಕ್ಷ್ಮಿ ವಿಲಾಸ್ ಬ್ಯಾಂಕ್ ಮೇಲೆ 30 ದಿನ ನಿರ್ಬಂಧ; ಹಣ ಹಿಂಪಡೆಯಲು ₹25,000 ಮಿತಿ
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.