ನವದೆಹಲಿ: ನಷ್ಟದಲ್ಲಿರುವ ನೀಲಾಚಲ್ ಇಸ್ಪಾತ್ ನಿಗಮ ನಿಯಮಿತವನ್ನು (ಎನ್‌ಐಎನ್‌ಎಲ್) ₹ 12,100 ಕೋಟಿಗೆ ಟಾಟಾ ಸ್ಟೀಲ್ ಕಂಪನಿಗೆ ಮಾರಾಟ ಮಾಡಲು ಒಪ್ಪಿಗೆ ನೀಡಿರುವುದಾಗಿ ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.

ಎನ್‌ಐಎನ್‌ಎಲ್ ಒಡಿಶಾದ ಕಳಿಂಗ ನಗರದಲ್ಲಿ 11 ಲಕ್ಷ ಟನ್ ಸಾಮರ್ಥ್ಯದ ಉಕ್ಕು ಘಟಕವನ್ನು ಹೊಂದಿದೆ. ಕಂಪನಿಯು ಭಾರಿ ನಷ್ಟದಲ್ಲಿದ್ದು 2020ರ ಮಾರ್ಚ್ 30ರಿಂದ ಅದರ ಘಟಕವನ್ನು ಮುಚ್ಚಲಾಗಿದೆ.

ಎನ್‌ಐಎನ್‌ಎಲ್ ಖರೀದಿಸಲು ಜಿಂದಾಲ್ ಸ್ಟೀಲ್ ಆ್ಯಂಡ್ ಪವರ್ ಲಿಮಿಟೆಡ್, ನಲ್ವಾ ಸ್ಟೀಲ್ ಆ್ಯಂಡ್ ಪವರ್ ಲಿಮಿಟೆಡ್ ಒಕ್ಕೂಟ, ಜೆಎಸ್‌ಡಬ್ಲ್ಯು ಸ್ಟೀಲ್ ಲಿಮಿಟೆಡ್ ಹಾಗೂ ಟಾಟಾ ಸ್ಟೀಲ್ ಹಣಕಾಸಿನ ಬಿಡ್ ಸಲ್ಲಿಸಿದ್ದವು. ಇದರಲ್ಲಿ ಟಾಟಾ ಸ್ಟೀಲ್ ಸಲ್ಲಿಸಿರುವ ಬಿಡ್ ಅನ್ನು ಸರ್ಕಾರ ಒಪ್ಪಿಕೊಂಡಿದ್ದು, ಷೇರು ಖರೀದಿ ಒಪ್ಪಂದಕ್ಕೆ ಸಹಿ ಹಾಕುವಂತೆ ಸರ್ಕಾರವು ಟಾಟಾ ಸ್ಟೀಲ್‌ಅನ್ನು ಆಹ್ವಾನಿಸಿದೆ.

ಮಾರಾಟಕ್ಕೆ ಒಪ್ಪಿಗೆ ನೀಡಿರುವ ಕುರಿತು ಹೂಡಿಕೆ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣಾ ಇಲಾಖೆಯ (ಡಿಐಪಿಎಎಂ) ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಟ್ವೀಟ್ ಮಾಡಿದ್ದಾರೆ. 2021ರ ಮಾರ್ಚ್ 31ರವರೆಗಿನ ಮಾಹಿತಿಯ ಪ್ರಕಾರ, ಕಂಪನಿಯ ನಷ್ಟ ಮತ್ತು ಹೊಣೆಗಾರಿಕೆಯು ₹ 6,600 ಕೋಟಿ ದಾಟಿದೆ. ನಷ್ಟವು ₹ 4,228 ಕೋಟಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.