ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ 11.48 ಕೋಟಿ ಪ್ಯಾನ್‌ಗಳಿಗೆ ಜೋಡಣೆಯಾಗದ ಆಧಾರ್‌!: ₹ 601 ಕೋಟಿ ದಂಡ ಸಂಗ್ರಹ

Published 5 ಫೆಬ್ರುವರಿ 2024, 14:30 IST
Last Updated 5 ಫೆಬ್ರುವರಿ 2024, 14:30 IST
ಅಕ್ಷರ ಗಾತ್ರ

ನವದೆಹಲಿ: ಗಡುವಿನೊಳಗೆ ಪ್ಯಾನ್– ಆಧಾರ್‌  ಜೋಡಣೆ ಮಾಡದ ವ್ಯಕ್ತಿಗಳಿಂದ ದಂಡದ ರೂಪದಲ್ಲಿ ₹601.97 ಕೋಟಿ ಸಂಗ್ರಹಿಸಲಾಗಿದೆ ಎಂದು ಕೇಂದ್ರ ಸರ್ಕಾರವು, ಸೋಮವಾರ ಲೋಕಸಭೆಗೆ ತಿಳಿಸಿದೆ.

ವಿನಾಯಿತಿ ಪಡೆದ ಕೆಲವು ವರ್ಗಗಳನ್ನು ಹೊರತುಪಡಿಸಿ, ಪ್ಯಾನ್‌ಗೆ ಆಧಾರ್‌ ಸಂಖ್ಯೆ ಜೋಡಿಸಲು 2023ರ ಜೂನ್‌ 30ರ ಗಡುವು ನೀಡಲಾಗಿತ್ತು. ಆ ವರ್ಷದ ಜುಲೈ 1ರ ನಂತರ ಜೋಡಣೆಗೆ ಮುಂದಾದರೆ ₹1,000 ದಂಡ ಪಾವತಿಸುವಂತೆ ಸರ್ಕಾರ ಆದೇಶಿಸಿತ್ತು.

ದೇಶದಲ್ಲಿ ಇನ್ನೂ 11.48 ಕೋಟಿ ಪ್ಯಾನ್‌ ಕಾರ್ಡ್‌ಗಳಿಗೆ ಆಧಾರ್‌ ಜೋಡಣೆಯಾಗಿಲ್ಲ (ಜನವರಿ 29ರ ವರೆಗೆ) ಎಂದು ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್ ಚೌಧರಿ ಅವರು, ಸಂಸತ್‌ನ ಕೆಳಮನೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಅಂತಿಮ ಗಡುವಿನೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸದ ವ್ಯಕ್ತಿಗಳಿಂದ 2023ರ ಜುಲೈ 1ರಿಂದ ಪ್ರಸಕ್ತ ವರ್ಷದ ಜನವರಿ 31ರ ವರೆಗೆ ಈ ದಂಡ ಮೊತ್ತವನ್ನು ಸಂಗ್ರಹಿಸಲಾಗಿದೆ ಎಂದು ಹೇಳಿದ್ದಾರೆ.

ಆಧಾರ್‌ ಜೋಡಣೆ ಮಾಡದವರ ಪ್ಯಾನ್‌ ಸಂಖ್ಯೆಯು 2023ರ ಜುಲೈ 1ರ ಬಳಿಕ ನಿಷ್ಕ್ರಿಯವಾಗಲಿದೆ. ಆ ಬಳಿಕ ತೆರಿಗೆ ಪಾವತಿದಾರರು ತೆರಿಗೆ ಮರುಪಾವತಿ (ರೀಫಂಡ್‌) ಪಡೆಯಲು ಅವಕಾಶ ಇರುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿತ್ತು.

ಅಲ್ಲದೇ, ಅಂತಹ ತೆರಿಗೆದಾರರ ಟಿಡಿಎಸ್ ಹಾಗೂ ಟಿಸಿಎಸ್‌ ಹೆಚ್ಚಿನ ಪ್ರಮಾಣದಲ್ಲಿ ಕಡಿತವಾಗಲಿದೆ. ಅಂತಹವರು ನಿಷ್ಕ್ರಿಯವಾದ ಪ್ಯಾನ್‌ ಮತ್ತು ಆಧಾರ್ ಸಂಖ್ಯೆ ನೀಡಿ ₹1,000 ಪಾವತಿಸಿ ಮತ್ತೆ ಸಕ್ರಿಯಗೊಳಿಸಿಕೊಳ್ಳಬಹುದು ಎಂದು ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT