ಸೋಮವಾರ, ಸೆಪ್ಟೆಂಬರ್ 26, 2022
22 °C

ಏರ್‌ ಇಂಡಿಯಾ ಅಂಗಸಂಸ್ಥೆಗಳ ಖಾಸಗೀಕರಣ ಪ್ರಕ್ರಿಯೆ ಶುರು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಏರ್ ಇಂಡಿಯಾ ಕಂಪನಿಯ ಅಂಗಸಂಸ್ಥೆಗಳಾಗಿದ್ದ ‘ಏರ್ ಇಂಡಿಯಾ ಏರ್‌ಪೋರ್ಟ್ ಸರ್ವಿಸಸ್ ಲಿಮಿಟೆಡ್’ (ಎಐಎಎಸ್‌ಎಲ್) ಮತ್ತು ‘ಏರ್ ಇಂಡಿಯಾ ಎಂಜಿನಿಯರಿಂಗ್ ಸರ್ವಿಸಸ್ ಲಿಮಿಟೆಡ್‌’ನ (ಎಐಇಎಸ್‌ಎಲ್) ಖಾಸಗೀಕರಣ ಪ್ರಕ್ರಿಯೆ ಶುರುವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಈ ಎರಡು ಕಂಪನಿಗಳ ಬಗ್ಗೆ ಖಾಸಗಿ ವಲಯದಲ್ಲಿ ಇರುವ ಆಸಕ್ತಿಯನ್ನು ತಿಳಿದುಕೊಳ್ಳಲು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆಯು (ಡಿಐಪಿಎಎಂ) ಹೂಡಿಕೆದಾರರ ಜೊತೆ ಸಭೆ ಮತ್ತು ರೋಡ್‌ಶೋ ಆಯೋಜಿಸುವುದನ್ನು ಶುರು ಮಾಡಿದೆ. ಆಸಕ್ತ ಬಿಡ್ಡರ್‌ಗಳಿಂದ ಅರ್ಜಿಯನ್ನು ಶೀಘ್ರದಲ್ಲಿಯೇ ಆಹ್ವಾನಿಸಲಾಗುತ್ತದೆ’ ಎಂದು ಅಧಿಕಾರಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.