ನವದೆಹಲಿ: ನೌಕರರ ಭವಿಷ್ಯನಿಧಿ (ಪಿ.ಎಫ್) ಖಾತೆಗೆ ನೌಕರರ ಕಡೆಯಿಂದ ಬರುವ ವಾರ್ಷಿಕ ₹ 5 ಲಕ್ಷದವರೆಗಿನ ಮೊತ್ತದ ಮೇಲಿನ ಬಡ್ಡಿಗೆ ತೆರಿಗೆ ವಿನಾಯಿತಿ ಇರಲಿದೆ ಎಂದು ಕೇಂದ್ರ ಸರ್ಕಾರವು ಮಂಗಳವಾರ ಪ್ರಕಟಿಸಿದೆ. ವಾರ್ಷಿಕ ₹ 2.5 ಲಕ್ಷಕ್ಕಿಂತ ಹೆಚ್ಚಿನ ಮೊತ್ತವನ್ನು ನೌಕರರು ಪಿ.ಎಫ್. ಖಾತೆಗೆ ಜಮಾ ಮಾಡಿದರೆ, ಅದಕ್ಕೆ ಬರುವ ಬಡ್ಡಿಗೆ ತೆರಿಗೆ ವಿಧಿಸಲಾಗುವುದು ಎಂದು ಈ ಬಾರಿಯ ಬಜೆಟ್‌ನಲ್ಲಿ ಪ್ರಸ್ತಾವಿಸಲಾಗಿತ್ತು.

ಆದರೆ, ₹ 5 ಲಕ್ಷದವರೆಗಿನ ಮೊತ್ತದ ಮೇಲಿನ ಬಡ್ಡಿಗೆ ವಿನಾಯಿತಿಯು ಎಲ್ಲರಿಗೂ ಅನ್ವಯವಾಗುವುದಿಲ್ಲ. ಯಾರಿಗೆ ಕಂಪನಿ ಕಡೆಯಿಂದ ಪಿ.ಎಫ್. ಖಾತೆಗೆ ಯಾವುದೇ ಕೊಡುಗೆ ಇರುವುದಿಲ್ಲವೋ ಅವರಿಗೆ ಮಾತ್ರ ಈ ವಿನಾಯಿತಿಯ ಸೌಲಭ್ಯ ಸಿಗಲಿದೆ.

ಹಣಕಾಸು ಮಸೂದೆ – 2021ರ ಮೇಲಿನ ಚರ್ಚೆಗೆ ಲೋಕಸಭೆಯಲ್ಲಿ ಉತ್ತರಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಪಿಎಫ್ ಬಡ್ಡಿಗೆ ತೆರಿಗೆ ವಿನಾಯಿತಿ ಕುರಿತ ಈ ಘೋಷಣೆ ಮಾಡಿದರು. ಮಸೂದೆಗೆ ಧ್ವನಿಮತದ ಮೂಲಕ ಅಂಗೀಕಾರ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.