ಮಂಗಳವಾರ, ಜೂನ್ 2, 2020
27 °C

ಕೇಂದ್ರದಿಂದ ₹4.88 ಲಕ್ಷ ಕೋಟಿ ಸಾಲ: ಅತನು ಚಕ್ರವರ್ತಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗಿನ ಹೊಸ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಕೇಂದ್ರ ಸರ್ಕಾರವು ₹ 4.88 ಲಕ್ಷ ಕೋಟಿ ಮೊತ್ತದ ಸಾಲ ಸಂಗ್ರಹಿಸಲಿದೆ.

‘ಕೊರೊನಾ–2’ ವೈರಸ್‌ ಸಾಂಕ್ರಾಮಿಕವಾಗಿ ಹರಡುವುದನ್ನು ತಡೆಗಟ್ಟಲು ಆರಂಭಿಸಿರುವ ಸಮರಕ್ಕೆ ಅಗತ್ಯವಾದ ಹಣಕಾಸು ಸಂಪನ್ಮೂಲ ಒಟ್ಟುಗೂಡಿಸುವ ಉದ್ದೇಶಕ್ಕೆ ಈ ಸಾಲ ಮಾಡಲಾಗುತ್ತಿದೆ’ ಎಂದು ಹಣಕಾಸು ವ್ಯವಹಾರಗಳ ಕಾರ್ಯದರ್ಶಿ ಅತನು ಚಕ್ರವರ್ತಿ ಹೇಳಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ್ದ ಬಜೆಟ್‌ನಲ್ಲಿ 2020–21ನೇ ಹಣಕಾಸು ವರ್ಷಕ್ಕೆ ಒಟ್ಟು ಸಾಲದ ಪ್ರಮಾಣವು ₹ 7.8 ಲಕ್ಷ ಕೋಟಿ ಇರಲಿದೆ ಎಂದು ತಿಳಿಸಿದ್ದರು. ಇದು ‌2019–20ನೇ ಹಣಕಾಸು ವರ್ಷದ ₹ 7.1 ಲಕ್ಷ ಕೋಟಿಗಿಂತ ಹೆಚ್ಚಿಗೆ ಇತ್ತು. ಒಟ್ಟಾರೆ ಸಾಲವು ಹಳೆ ಸಾಲಗಳ ಮರುಪಾವತಿಯನ್ನೂ ಒಳಗೊಂಡಿರಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು