ನವದೆಹಲಿ : ಜಿಎಸ್‌ಟಿ ಇನ್ವಾಯ್ಸ್ ಅಪ್ಲೋಡ್ ಮಾಡಿದವರಿಗೆ ಬಹುಮಾನ ನೀಡುವ ‘ಮೇರಾ ಬಿಲ್ ಮೇರಾ ಅಧಿಕಾರ್’ ಯೋಜನೆಗೆ ಕೇಂದ್ರ ಸರ್ಕಾರವು ಸೆಪ್ಟೆಂಬರ್ 1ರಂದು ಚಾಲನೆ ನೀಡಲಿದೆ. ಆರಂಭಿಕ ಹಂತದಲ್ಲಿ ಇದು ಮೂರು ರಾಜ್ಯಗಳಲ್ಲಿ, ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ಬರಲಿದೆ.
ಗ್ರಾಹಕರು ವರ್ತಕರಲ್ಲಿ ಜಿಎಸ್‌ಟಿ ಇನ್ವಾಯ್ಸ್ ಕೇಳಿ ಪಡೆಯುವುದನ್ನು ಉತ್ತೇಜಿಸುವುದು ಈ ಯೋಜನೆಯ ಉದ್ದೇಶ. ಅಸ್ಸಾಂ, ಗುಜರಾತ್, ಹರಿಯಾಣ ರಾಜ್ಯದಲ್ಲಿ ಹಾಗೂ ಪುದುಚೇರಿ, ದಮನ್ ಮತ್ತು ದೀವ್, ದಾದ್ರಾ ಮತ್ತು ನಗರ್ ಹವೇಲಿ ಕೇಂದ್ರಾಡಳಿತ ಪ್ರದೇಶದಲ್ಲಿ ಇದು ಈಗ ಜಾರಿಗೆ ಬರಲಿದೆ ಎಂದು ಪರೋಕ್ಷ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಐಟಿ) ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.