ಭಾನುವಾರ, ಸೆಪ್ಟೆಂಬರ್ 25, 2022
22 °C

ಒಂದೇ ಬಗೆಯ ಚಾರ್ಜರ್‌: ಸಮಿತಿ ರಚಿಸಲಿರುವ ಕೇಂದ್ರ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಮೊಬೈಲ್‌ ಫೋನ್‌ಗಳು ಹಾಗೂ ಒಂದೆಡೆಯಿಂದ ಇನ್ನೊಂದೆಡೆ ಸುಲಭವಾಗಿ ಸಾಗಿಸುವ ಎಲ್ಲ ಎಲೆಕ್ಟ್ರಾನಿಕ್‌ ಉಪಕರಣಗಳಿಗೆ ಒಂದೇ ಬಗೆಯ ಚಾರ್ಜರ್‌ ಬಳಕೆ ಸಾಧ್ಯತೆಯ ಕುರಿತು ಪರಿಶೀಲಿಸಲು ಕೇಂದ್ರ ಸರ್ಕಾರವು ತಜ್ಞರ ಸಮಿತಿಯೊಂದನ್ನು ರಚಿಸಲಿದೆ.

ಈ ಸಮಿತಿಯು ವಿಸ್ತೃತ ವರದಿಯನ್ನು ಎರಡು ತಿಂಗಳುಗಳಲ್ಲಿ ಸಲ್ಲಿಸಲಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಬುಧವಾರ ಹೇಳಿದ್ದಾರೆ.

ಆರಂಭಿಕ ಹಂತದಲ್ಲಿ ದೇಶದಲ್ಲಿ ಸಿ–ಟೈಪ್ ಸೇರಿದಂತೆ ಎರಡು ಬಗೆಯ ಚಾರ್ಜಿಂಗ್‌ ‍‍ಪೋರ್ಟ್‌ಗಳ ಬಳಕೆಯನ್ನು ವ್ಯಾಪಕಗೊಳಿಸುವ ಸಾಧ್ಯತೆಯನ್ನು ಪರಿಶೀಲಿಸಬಹುದು ಎಂದು ಅವರು ಉದ್ಯಮದ ಪ್ರತಿನಿಧಿಗಳ ಜೊತೆ ಮಾತುಕತೆಯ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ಇದೊಂದು ಸಂಕೀರ್ಣ ವಿಚಾರ. ಅಂತಿಮ ತೀರ್ಮಾನ ಕೈಗೊಳ್ಳುವ ಮೊದಲು ಉದ್ಯಮ ವಲಯ, ಬಳಕೆದಾರರು ಮತ್ತು ಪರಿಸರದ ಬಗ್ಗೆ ನಾವು ಆಲೋಚಿಸಬೇಕು’ ಎಂದು ಅವರು ಹೇಳಿದ್ದಾರೆ.

ಸ್ಮಾರ್ಟ್‌ಫೋನ್‌ಗಳು ಮತ್ತು ಫೀಚರ್ ಫೋನ್‌ಗಳು, ಲ್ಯಾ‍ಪ್‌ಟಾಪ್‌ ಮತ್ತು ಐಪ್ಯಾಡ್‌ಗಳು, ಸ್ಮಾರ್ಟ್‌ವಾಚ್‌ನಂತಹ ಧರಿಸಬಹುದಾದ ಎಲೆಕ್ಟ್ರಾನಿಕ್‌ ಉಪಕರಣಗಳಲ್ಲಿ ಯಾವ ಬಗೆಯ ಚಾರ್ಜಿಂಗ್ ಪೋರ್ಟ್‌ಗಳು ಇರಬೇಕು ಎಂಬ ಬಗ್ಗೆ ತಜ್ಞರ ಪ್ರತ್ಯೇಕ ಸಮಿತಿಗಳು ಪರಿಶೀಲನೆ ನಡೆಸಲಿವೆ. ಇವು ಎರಡು ತಿಂಗಳಲ್ಲಿ ವರದಿ ಸಲ್ಲಿಸಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು