ನವದೆಹಲಿ: ಜನವರಿಯಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವು ಶೇ 6.2ರಷ್ಟು ಹೆಚ್ಚಾಗಿದ್ದು, ಒಟ್ಟು ವರಮಾನ ₹1.93 ಲಕ್ಷ ಕೋಟಿಗೆ ತಲುಪಿದೆ. ಆಮದುಗಳಿಂದ ಹೆಚ್ಚಿನ ಆದಾಯ ಬಂದಿದೆ ಎಂದು ಮೂಲಗಳು ಭಾನುವಾರ ತಿಳಿಸಿವೆ.

ಒಟ್ಟು ಮರುಪಾವತಿ ಶೇ 3.1 ರಷ್ಟು ಇಳಿಕೆಯಾಗಿ ₹22,665 ಕೋಟಿಗೆ ತಲುಪಿದೆ. ಆದಾಗ್ಯೂ ಜನವರಿಯಲ್ಲಿ ನಿವ್ವಳ ಜಿಎಸ್ಟಿ ಸಂಗ್ರಹ ಶೇ 7.6 ರಷ್ಟು ಹೆಚ್ಚಾಗಿದ್ದು, ₹1.71 ಲಕ್ಷ ಕೋಟಿಗೆ ತಲುಪಿದೆ.

ಜನವರಿಯಲ್ಲಿ ಸೆಸ್ ಸಂಗ್ರಹ (ತಂಬಾಕು ಉತ್ಪನ್ನಗಳಿಂದ) ₹5,768 ಕೋಟಿ ಇತ್ತು. ಕಳೆದ ವರ್ಷ ಜನವರಿಯಲ್ಲಿ ಕಾರುಗಳು ಮತ್ತು ತಂಬಾಕುಗಳಂತಹ ಐಷಾರಾಮಿ ಮತ್ತು ಹಾನಿಕಾರಕ ಸರಕುಗಳ ಮೇಲೆ ಸೆಸ್ ವಿಧಿಸಿದ್ದ ಸಂದರ್ಭದಲ್ಲಿ, ಆ ತಿಂಗಳಲ್ಲಿ ₹13,009 ಕೋಟಿ ಸೆಸ್ ಸಂಗ್ರಹವಾಗಿತ್ತು.

2025ರ ಸೆಪ್ಟೆಂಬರ್ 22ರಿಂದ ಜಾರಿಗೆ ಬರುವಂತೆ ಜಿಎಸ್ಟಿ ಮಂಡಳಿಯು 375ಕ್ಕೂ ಹೆಚ್ಚು ವಸ್ತುಗಳ ಮೇಲಿನ ಜಿಎಸ್ಟಿ ಇಳಿಕೆ ಮಾಡಿತ್ತು. ಇದರಿಂದಾಗಿ ಸರಕುಗಳು ಅಗ್ಗವಾಗಿದ್ದವು. ಉಳಿದಂತೆ ಐಷಾರಾಮಿ, ಹಾನಿಕಾರಕ ಸರಕುಗಳಿಗೆ (ತಂಬಾಕು ಮತ್ತು ಸಂಬಂಧಿತ ಉತ್ಪನ್ನ) ಮಾತ್ರ ಪರಿಹಾರ ಸೆಸ್ ಅನ್ನು ವಿಧಿಸಲಾಗುತ್ತಿದೆ. ಜಿಎಸ್ಟಿ ದರ ಕಡಿತಗೊಳಿಸಲಾಗಿದ್ದು, ಇದರಿಂದ ಆದಾಯ ಸಂಗ್ರಹಣೆಯ ಮೇಲೆ ಪರಿಣಾಮ ಬೀರಿದೆ.

ಜನವರಿಯಲ್ಲಿ ದೇಶೀಯ ವಹಿವಾಟಿನಿಂದ ಒಟ್ಟು ತೆರಿಗೆ ಸಂಗ್ರಹ ಶೇ 4.8 ರಷ್ಟು ಹೆಚ್ಚಾಗಿ ₹1.41 ಲಕ್ಷ ಕೋಟಿಗಳಿಗೆ ತಲುಪಿದೆ. ಆಮದು ಆದಾಯ ಶೇ 10.1ರಷ್ಟು ಏರಿಕೆಯಾಗಿ ₹52,253 ಕೋಟಿಗೆ ತಲುಪಿದೆ.
.ಜೂನ್ನಲ್ಲಿ ₹1.84 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.