ನವದೆಹಲಿ: ಆರ್ಥಿಕ ಚಟುವಟಿಕೆಗಳು ಹೆಚ್ಚಾಗಿರುವುದರಿಂದ ಅಕ್ಟೋಬರ್‌ನಲ್ಲಿ ಜಿಎಸ್‌ಟಿ ವರಮಾನ ಸಂಗ್ರಹ ಹೆಚ್ಚಾಗಿದೆ. ಆನ್‌ಲೈನ್ ಗೇಮಿಂಗ್ ಕಂಪನಿಗಳಿಗೆ ನೋಟಿಸ್ ನೀಡಿರುವುದರಿಂದ ಅಲ್ಲ ಎಂದು ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿ (ಸಿಬಿಐಸಿ) ಅಧ್ಯಕ್ಷ ಸಂಜಯ್ ಕುಮಾರ್ ಅಗರ್ವಾಲ್ ಬುಧವಾರ ಹೇಳಿದ್ದಾರೆ.
ಜಿಎಸ್‌ಟಿ ವರಮಾನ ಸಂಗ್ರಹವು ಅಕ್ಟೋಬರ್‌ನಲ್ಲಿ ಶೇ 13ರಷ್ಟು ಹೆಚ್ಚಾಗಿ ₹1.72 ಲಕ್ಷ ಕೋಟಿಗೆ ಏರಿಕೆ ಕಂಡಿದೆ. ಜಿಎಸ್‌ಟಿ ವ್ಯವಸ್ಥೆ ಬಂದ ಬಳಿಕ ತಿಂಗಳೊಂದರಲ್ಲಿ ಎರಡನೇ ಹೆಚ್ಚಿನ ವರಮಾನ ಸಂಗ್ರಹ ಇದಾಗಿದೆ.
ಡಿಪಿಐಐಟಿ–ಸಿಐಐ ಆಯೋಜಿಸಿದ್ದ ಸುಲಲಿತ ವಹಿವಾಟಿನ ಕುರಿತ ರಾಷ್ಟ್ರೀಯ ಸಮಾವೇಶದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಮದು ಮೇಲಿನ ಐಜಿಎಸ್‌ಟಿ ಸಂಗ್ರಹ ಹೆಚ್ಚಾಗಿರುವುದ ಸಹ ಅಕ್ಟೋಬರ್‌ನಲ್ಲಿ ವರಮಾನ ಸಂಗ್ರಹದಲ್ಲಿ ಏರಿಕೆಗೆ ಒಂದು ಕಾರಣ ಎಂದಿದ್ದಾರೆ.
ಆನ್‌ಲೈನ್ ಆಟಗಳಿಗೆ ಬೆಟ್ಟಿಂಗ್‌ನ ಪೂರ್ಣ ಮೊತ್ತದ ಮೇಲೆ ಶೇ 28ರಷ್ಟು ತೆರಿಗೆ ವಿಧಿಸಲಾಗಿದೆ. 2017–18ನೇ ಹಣಕಾಸು ವರ್ಷದಲ್ಲಿ ಕಡಿಮೆ ತೆರಿಗೆ ಪಾವತಿ ಮಾಡಿರುವುದಕ್ಕೆ ಹಲವು ಕಂಪನಿಗಳಿಗೆ ಸಿಬಿಐಸಿ ನೋಟಿಸ್ ಜಾರಿಮಾಡುತ್ತಿದೆ. ಆನ್‌ಲೈನ್ ಗೇಮ್ ಮತ್ತು ಕ್ಯಾಸಿನೋ ನಡೆಸುತ್ತಿರುವ ಕಂಪನಿಗಳಿಗೆ ₹1 ಲಕ್ಷ ಕೋಟಿ ತೆರಿಗೆ ಪಾವತಿಸುವಂತೆ ಸಿಬಿಐಸಿ ಸೆಪ್ಟೆಂಬರ್‌ನಲ್ಲಿ ನೋಟಿಸ್ ನೀಡಿದೆ.