ನವದೆಹಲಿ: 2025ರಲ್ಲಿ ದೇಶದಲ್ಲಿ ವಿವಿಧ ಬಗೆಯ ವಾಹನಗಳ ರಿಟೇಲ್ ಮಾರಾಟ ಪ್ರಮಾಣವು ಶೇಕಡ 7.71ರಷ್ಟು ಹೆಚ್ಚಾಗಿದೆ ಎಂದು ಆಟೊಮೊಬೈಲ್ ಡೀಲರ್ಗಳ ಸಂಘಗಳ ಒಕ್ಕೂಟ (ಎಫ್ಎಡಿಎ) ಮಂಗಳವಾರ ತಿಳಿಸಿದೆ.

ಸೆಪ್ಟೆಂಬರ್ 22ರಿಂದ ಜಾರಿಗೆ ಬಂದ ಜಿಎಸ್ಟಿ ದರ ಪರಿಷ್ಕರಣೆಯು ವಾಹನ ಮಾರಾಟ ಹೆಚ್ಚಳ ಕಾಣಲು ನೆರವಾಗಿದೆ ಎಂದು ಎಫ್ಎಡಿಎ ಹೇಳಿದೆ.

2025ನೆಯ ಇಸವಿಯು ಎರಡು ಬಗೆಯ ಪರಿಸ್ಥಿತಿಗಳನ್ನು ಹೊಂದಿತ್ತು. ಜನವರಿಯಿಂದ ಆಗಸ್ಟ್ವರೆಗೆ ಮಾರುಕಟ್ಟೆಯಲ್ಲಿ ತೇಜಿ ವಾತಾವರಣ ಇರಲಿಲ್ಲ. ಆದಾಯ ತೆರಿಗೆ ಮಿತಿ ಹೆಚ್ಚಳ, ಆರ್ಬಿಐನಿಂದ ರೆಪೊ ದರ ಇಳಿಕೆಯ ಉತ್ತೇಜನಾ ಕ್ರಮಗಳು ಇದ್ದರೂ ಮಾರಾಟ ಹೆಚ್ಚಿರಲಿಲ್ಲ ಎಂದು ಎಫ್ಎಡಿಎ ಅಧ್ಯಕ್ಷ ಸಿ.ಎಸ್. ವಿಘ್ನೇಶ್ವರ ಹೇಳಿದ್ದಾರೆ.

‘ಆದರೆ ಸೆಪ್ಟೆಂಬರ್ನಲ್ಲಿ ಜಿಎಸ್ಟಿ ದರ ಪರಿಷ್ಕರಣೆ ಜಾರಿಗೆ ಬಂದ ನಂತರದಲ್ಲಿ ಮಾರುಕಟ್ಟೆಯಲ್ಲಿ ಪರಿವರ್ತನೆ ಕಂಡುಬಂತು. ಸೆಪ್ಟೆಂಬರ್ನಿಂದ ಡಿಸೆಂಬರ್ವರೆಗಿನ ಅವಧಿಯಲ್ಲಿ ಮಾರಾಟವು ಹೆಚ್ಚಳವಾಯಿತು’ ಎಂದು ಅವರು ತಿಳಿಸಿದ್ದಾರೆ.

2025ರಲ್ಲಿ ದ್ವಿಚಕ್ರ ವಾಹನ, ಪ್ರಯಾಣಿಕ ವಾಹನ, ವಾಣಿಜ್ಯ ಬಳಕೆ ವಾಹನ ವಿಭಾಗಗಳಲ್ಲಿ ಇ.ವಿ. ಮಾರಾಟವು ಹೆಚ್ಚಳ ಕಂಡಿದೆ. ಅಲ್ಲದೆ, ಪ್ರಯಾಣಿಕ ವಾಹನ ಹಾಗೂ ವಾಣಿಜ್ಯ ಬಳಕೆ ವಾಹನ ವಿಭಾಗದಲ್ಲಿ ಸಿಎನ್ಜಿ ವಾಹನಗಳ ಮಾರಾಟ ಕೂಡ ಜಾಸ್ತಿ ಆಗಿದೆ ಎಂದಿದ್ದಾರೆ.

ಮುಂದಿನ ಮೂರು ತಿಂಗಳ ಅವಧಿಯಲ್ಲಿ ವಾಹನ ಮಾರಾಟವು ಹೆಚ್ಚಳ ಕಾಣಲಿದೆ ಎಂಬುದಾಗಿ ಶೇ 74.91ರಷ್ಟು ಡೀಲರ್ಗಳು ಭಾವಿಸಿದ್ದಾರೆ ಎಂಬುದನ್ನು ಎಫ್ಎಡಿಎ ನಡೆಸಿದ ಸಮೀಕ್ಷೆಯೊಂದು ತಿಳಿಸಿದೆ.

ಆರ್ಬಿಐ ರೆಪೊ ದರವನ್ನು ಶೇ 5.25ರ ಮಟ್ಟದಲ್ಲಿ ಇರಿಸಿರುವುದು ವಾಹನ ಖರೀದಿ ವೆಚ್ಚವನ್ನು ತಗ್ಗಿಸಿದೆ. ಫೆಬ್ರುವರಿಯಲ್ಲಿ ಮಂಡನೆ ಆಗಲಿರುವ ಕೇಂದ್ರ ಬಜೆಟ್, ಖರೀದಿಯನ್ನು ಉತ್ತೇಜಿಸುವ ಹಾಗೂ ತೆರಿಗೆಗಳ ವಿಚಾರದಲ್ಲಿ ಕೆಲವು ವಿನಾಯಿತಿಗಳನ್ನು ನೀಡುವ ರೀತಿಯಲ್ಲಿ ಇರುತ್ತದೆ ಎಂಬ ನಿರೀಕ್ಷೆಯು ಮಾರುಕಟ್ಟೆಯಲ್ಲಿದೆ ಎಂದು ಎಫ್ಎಡಿಎ ಪ್ರಕಟಣೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.