ನವದೆಹಲಿ: ನಕಲಿ ಕಂಪನಿ ಸೃಷ್ಟಿಸುವ ಮೂಲಕ ₹ 43 ಕೋಟಿ ಮೌಲ್ಯದ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ವಂಚಿಸುತ್ತಿದ್ದ ರವೀಂದರ್ ಕುಮಾರ್ ಎನ್ನುವವರನ್ನು ಜಿಎಸ್‌ಟಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಹಣಕಾಸು ಸಚಿವಾಲಯ ಗುರುವಾರ ತಿಳಿಸಿದೆ.

ಹರಿಯಾಣದ ಗುರುಗ್ರಾಮ ವಲಯ ಘಟಕದ ಜಿಎಸ್‌ಟಿ ಗುಪ್ತದಳ ಮಹಾ ನಿರ್ದೇಶಕರ (ಡಿಜಿಜಿಐ) ಕಚೇರಿಯ ಅಧಿಕಾರಿಗಳು ದೆಹಲಿ ನಿವಾಸಿ ಆಗಿರುವ ರವೀಂದರ್ ಅವರನ್ನು ಬಂಧಿಸಿದ್ದಾರೆ.

ಹರಿಯಾಣ, ದೆಹಲಿ ಮತ್ತು ಜಾರ್ಖಂಡ್‌ನಲ್ಲಿ ನಕಲಿ ಕಂಪನಿಗಳನ್ನು ಸೃಷ್ಟಿಸಲಾಗಿದೆ ಎನ್ನುವುದು ತಿಳಿದುಬಂದಿದೆ. ರವಿಂದರ್ ಅವರು ತಲೆಮರೆಸಿಕೊಂಡಿದ್ದರು.

₹ 237.98 ಕೋಟಿ ಮೌಲ್ಯದ ನಕಲಿ ಇನ್‌ವಾಯ್ಸ್ ಸೃಷ್ಟಿಸಿ ವಂಚನೆ ಎಸಗಿರುವುದಾಗಿ ಬಂಧಿತ ವ್ಯಕ್ತಿ ಹೇಳಿದ್ದಾರೆ. ರವೀಂದರ್ ಅವರನ್ನು ಮಾರ್ಚ್ 9ರಂದು ಬಂಧಿಸಿದ್ದು, 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.