ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ನಕಲಿ ಇನ್‌ವಾಯ್ಸ್‌ ಸೃಷ್ಟಿಸಿ ವಂಚನೆ: 23 ಕಂಪನಿಗಳ ಜಾಲ ಪತ್ತೆ

Last Updated 11 ಜುಲೈ 2021, 12:03 IST
ಅಕ್ಷರ ಗಾತ್ರ

ನವದೆಹಲಿ: ನಕಲಿ ಇನ್‌ವಾಯ್ಸ್‌ ಸೃಷ್ಟಿಸಿ ಜಿಎಸ್‌ಟಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್‌ (ಐಟಿಸಿ) ವಂಚಿಸುತ್ತಿದ್ದ 23 ಕಂಪನಿಗಳ ಜಾಲವನ್ನು ಜಿಎಸ್‌ಟಿ ಅಧಿಕಾರಿಗಳು ಭೇದಿಸಿದ್ದಾರೆ. ₹ 551 ಕೋಟಿ ಮೌಲ್ಯದ ನಕಲಿ ಇನ್‌ವಾಯ್ಸ್‌ ಸೃಷ್ಟಿಸುವ ಮೂಲಕ ₹ 91 ಕೋಟಿ ಮೊತ್ತದ ಐಟಿಸಿ ವಂಚನೆ ಎಸಗಿರುವುದನ್ನು ಪತ್ತೆ ಮಾಡಿದ್ದಾರೆ.

ದೆಹಲಿ ಪೂರ್ವ ವಿಭಾಗದ ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್‌ಟಿ) ಆಯುಕ್ತರ ಕಚೇರಿಯ ಅಧಿಕಾರಿಗಳು ಈ ವಂಚನೆ ಪ್ರಕರಣವನ್ನು ಭೇದಿಸಿದ್ದಾರೆ ಎಂದು ಹಣಕಾಸು ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ಗಿರಿಧರ್ ಎಂಟರ್‌ಪ್ರೈಸಸ್‌, ಅರುಣ್‌ ಸೇಲ್ಸ್‌, ಅಕ್ಷಯ್‌ ಟ್ರೇಡರ್ಸ್‌, ಪದ್ಮಾವತಿ ಎಂಟರ್‌ಪ್ರೈಸಸ್‌ ಮತ್ತು ಇತರೆ 19 ಕಂಪನಿಗಳು ಈ ವಂಚನೆಯ ಜಾಲದಲ್ಲಿ ತೊಡಗಿಕೊಂಡಿವೆ.

ದಿನೇಶ್ ಗುಪ್ತ, ಶುಭಂ ಗುಪ್ತ, ವಿನೋದ್‌ ಜೈನ್‌ ಮತ್ತು ಯೋಗೇಶ್ ಗೋಯೆಲ್‌ ಎನ್ನುವವರು ನಕಲಿ ಇನ್‌ವಾಯ್ಸ್‌ ಮಾರಾಟ ಮಾಡುತ್ತಿದ್ದರು. ಈ ಮೂವರು ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT