ಜಿಎಸ್‌ಟಿ ದರ ಇಳಿಕೆ ಸಾಧ್ಯತೆ

7

ಜಿಎಸ್‌ಟಿ ದರ ಇಳಿಕೆ ಸಾಧ್ಯತೆ

Published:
Updated:
Deccan Herald

ನವದೆಹಲಿ: ಇದೇ 22ರಂದು ನಡೆಯಲಿರುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಸರಕು ಮತ್ತು ಸೇವಾ ತೆರಿಗೆ ದರಗಳನ್ನು ತಗ್ಗಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಗ್ರಾಹಕ ಬಳಕೆ ವಸ್ತುಗಳಿಗೆ ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ ಶೇ 28ರ ಹಂತದಲ್ಲಿ ಇರುವ ಸರಕುಗಳನ್ನು ಶೇ 18ರ ವ್ಯಾಪ್ತಿಗೆ ತರುವ ಬಗ್ಗೆ ಸಮಿತಿ ಚಿಂತನೆ ನಡೆಸುತ್ತಿದೆ.

ಏರ್‌ ಕಂಡೀಷನರ್, ಡಿಜಿಟಲ್ ಕ್ಯಾಮೆರಾ, ವಿಡಿಯೊ ರೆಕಾರ್ಡ್ಸ್‌, ವಾಷಿಂಗ್ ಮಷಿನ್‌ ಮತ್ತು ವಾಹನಗಳಿಗೆ ಗರಿಷ್ಠ ಜಿಎಸ್‌ಟಿ ಇದೆ. ಥರ್ಡ್‌ ಪಾರ್ಟಿ ಮೋಟರ್ ಇನ್ಯೂರೆನ್ಸ್‌ ಮೇಲಿನ ತೆರಿಗೆ ಸದ್ಯ ಶೇ 18ರಷ್ಟಿದ್ದು, ಅದನ್ನೂ ಇಳಿಕೆ ಮಾಡುವ ಸಾಧ್ಯತೆ ಇದೆ.

ಸದ್ಯ 35 ಸರಕುಗಳು ಶೇ 28ರ ಜಿಎಸ್‌ಟಿಯಲ್ಲಿವೆ. ಒಂದು ವರ್ಷದಲ್ಲಿ 191 ಸರಕುಗಳ ಜಿಎಸ್‌ಟಿ ದರದಲ್ಲಿ ಇಳಿಕೆ ಮಾಡಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !