ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಎಸ್‌ಟಿ ಜಾರಿಯಿಂದ ವಸ್ತುಗಳ ಬೆಲೆ ಇಳಿಕೆ: ಹಣಕಾಸು ಸಚಿವಾಲಯ

Published 1 ಜುಲೈ 2024, 16:06 IST
Last Updated 1 ಜುಲೈ 2024, 16:06 IST
ಅಕ್ಷರ ಗಾತ್ರ

ನವದೆಹಲಿ: 7 ವರ್ಷಗಳನ್ನು ಪೂರೈಸಿದ ಸರಕು ಮತ್ತು ಸೇವಾ ತೆರಿಗೆಯು (ಜಿಎಸ್‌ಟಿ) ಗೃಹೋಪಯೋಗಿ ವಸ್ತುಗಳು, ಮೊಬೈಲ್ ಫೋನ್‌ ಸೇರಿದಂತೆ ಇತರೆ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವ ಮೂಲಕ ಪ್ರತಿ ಮನೆಗೆ ಸಂತಸ ನೀಡಿದೆ ಎಂದು ಹಣಕಾಸು ಸಚಿವಾಲಯವು ‘ಎಕ್ಸ್‌’ನಲ್ಲಿ ಸೋಮವಾರ ತಿಳಿಸಿದೆ.

ಜಿಎಸ್‌ಟಿ ಅನುಷ್ಠಾನದ ನಂತರ ಆಹಾರ ಪದಾರ್ಥಗಳು ಮತ್ತು ವಸ್ತುಗಳ ಮೇಲಿನ ವೆಚ್ಚದ ಉಳಿತಾಯದಿಂದ ಜಿಎಸ್‌ಟಿ ಜನರ ಜೀವನವನ್ನು ಸುಲಭಗೊಳಿಸಿದೆ ಎಂದು ಹೇಳಿದೆ.

ಜಿಎಸ್‌ಟಿ ಜಾರಿಗೂ ಮುನ್ನ ಶೇ 2.5-ಶೇ 4ರಷ್ಟು ಪ್ಯಾಕ್ ಮಾಡದ ಗೋಧಿ, ಅಕ್ಕಿ, ಮೊಸರು ಮತ್ತು ಲಸ್ಸಿಯಂತಹ ಆಹಾರ ಪದಾರ್ಥಗಳ ತೆರಿಗೆ ವಿಧಿಸಲಾಗುತ್ತಿತ್ತು. ಜಿಎಸ್‌ಟಿ ಜಾರಿಯಾದ ನಂತರ ಈಗ ಜಿಎಸ್‌ಟಿ ವಿಧಿಸಲ್ಲ.

2023-24ರ ಆರ್ಥಿಕ ವರ್ಷದಲ್ಲಿ ₹2 ಕೋಟಿ ವರೆಗಿನ ಒಟ್ಟು ವಾರ್ಷಿಕ ವಹಿವಾಟು ಹೊಂದಿರುವ ತೆರಿಗೆದಾರರಿಗೆ ವಾರ್ಷಿಕ ರಿಟರ್ನ್ ಫೈಲಿಂಗ್ (ಸಲ್ಲಿಕೆ) ಅಗತ್ಯವನ್ನು ಮನ್ನಾ ಮಾಡಲು ಜಿಎಸ್‌ಟಿ ಕೌನ್ಸಿಲ್ ಶಿಫಾರಸು ಮಾಡಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT