ನವದೆಹಲಿ: ವಾಹನಗಳ ವರ್ಗೀಕರಣದಿಂದ ಉಂಟಾಗುವ ವ್ಯಾಜ್ಯಗಳನ್ನು ಪರಿಹರಿಸಲು ಅನುಕೂಲ ಆಗುವ ರೀತಿಯಲ್ಲಿ ಜಿಎಸ್ಟಿ ವ್ಯವಸ್ಥೆಯ ಅಡಿ ವಾಹನಗಳ ತೆರಿಗೆ ಹಂತವನ್ನು ನಿರ್ಧಾರ ಮಾಡಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಯಲ್ಲಿ ಹಲವು ಸುಧಾರಣೆಗಳನ್ನು ತರುವ ಪ್ರಸ್ತಾವವನ್ನು ಕೇಂದ್ರ ಸರ್ಕಾರವು ಸಿದ್ಧಪಡಿಸಿದೆ.

ವಾಹನಗಳ ಎಂಜಿನ್ ಸಾಮರ್ಥ್ಯ ಹಾಗೂ ವಾಹನಗಳ ಗಾತ್ರವನ್ನು ಆಧರಿಸಿ ಅವುಗಳನ್ನು ವರ್ಗೀಕರಿಸಲಾಗುತ್ತಿದೆ. ಈಗಿರುವ ವ್ಯವಸ್ಥೆಯಲ್ಲಿ ವಾಹನಗಳಿಗೆ ಶೇಕಡ 28ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಇದು ಜಿಎಸ್ಟಿ ವ್ಯವಸ್ಥೆಯಲ್ಲಿ ಗರಿಷ್ಠ ಮಟ್ಟದ ತೆರಿಗೆ.

ತೆರಿಗೆ ಮಾತ್ರವೇ ಅಲ್ಲದೆ, ವಾಹನಗಳ ಮೇಲೆ ಶೇ 1ರಿಂದ ಶೇ 22ರವರೆಗೆ ಪರಿಹಾರ ಸೆಸ್ ವಿಧಿಸಲಾಗುತ್ತಿದೆ. ಇದು ವಾಹನ ಯಾವ ಬಗೆಯದ್ದು ಎಂಬುದನ್ನು ಆಧರಿಸಿ ತೀರ್ಮಾನವಾಗುತ್ತದೆ.

ವಾಹನಗಳ ಎಂಜಿನ್ ಸಾಮರ್ಥ್ಯ ಹಾಗೂ ವಾಹನಗಳ ಉದ್ದವನ್ನು ಆಧರಿಸಿ ಒಟ್ಟು ತೆರಿಗೆ ಪ್ರಮಾಣವು ಶೇ 29ರಿಂದ ಶೇ 50ರವರೆಗೆ ಇರುತ್ತದೆ. ಪೆಟ್ರೋಲ್ ಚಾಲಿತ ಸಣ್ಣ ಕಾರುಗಳಿಗೆ ಶೇ 29ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಎಸ್ಯುವಿಗಳಿಗೆ ಶೇ 50ರಷ್ಟು ತೆರಿಗೆ ಇರುತ್ತದೆ. ವಿದ್ಯುತ್ ಚಾಲಿತ ವಾಹನಗಳಿಗೆ ಶೇ 5ರಷ್ಟು ತೆರಿಗೆ ನಿಗದಿ ಮಾಡಲಾಗಿದೆ.

ಜಿಎಸ್ಟಿ ವ್ಯವಸ್ಥೆಯ ಅಡಿಯಲ್ಲಿ ಎರಡು ಹಂತಗಳ ತೆರಿಗೆಯನ್ನು ಮಾತ್ರ ಉಳಿಸಿಕೊಳ್ಳುವ ಪ್ರಸ್ತಾವವನ್ನು ಈಗ ಕೇಂದ್ರ ಸರ್ಕಾರವು ಸಿದ್ಧಪಡಿಸಿದೆ. ಎಂಜಿನ್ ಸಾಮರ್ಥ್ಯ ಹಾಗೂ ವಾಹನದ ಉದ್ದವನ್ನು ಆಧರಿಸಿ ವರ್ಗೀಕರಣ ಮಾಡುವುದರಿಂದ ಉಂಟಾಗುವ ವ್ಯಾಜ್ಯಗಳನ್ನು ಕೊನೆಗಾಣಿಸುವ ಗುರಿಯೊಂದಿಗೆ ವಾಹನಗಳನ್ನು ನಿರ್ದಿಷ್ಟ ತೆರಿಗೆ ಹಂತವೊಂದರಲ್ಲಿ ತರಲಾಗುತ್ತದೆ ಎಂದು ಮೂಲಗಳು ವಿವರಿಸಿವೆ.

ತೆರಿಗೆ ಪ್ರಮಾಣವನ್ನು ಕಡಿಮೆ ಮಾಡುವುದರಿಂದ, ಕಾರುಗಳ ಬೆಲೆ ಇಳಿಕೆ ಆಗಿ ಅವು ಇನ್ನಷ್ಟು ಕೈಗೆಟಕುವಂತೆ ಆಗುತ್ತವೆ. ಆಗ ಅವುಗಳ ಮಾರಾಟ ಹೆಚ್ಚಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಿಎಸ್ಟಿ ವ್ಯವಸ್ಥೆಯಲ್ಲಿ ಈಗ ಇರುವ ಶೇ 12 ಹಾಗೂ ಶೇ 28ರ ತೆರಿಗೆ ಹಂತಗಳನ್ನು ತೆಗೆಯುವ ಕೇಂದ್ರದ ಪ್ರಸ್ತಾವವನ್ನು ಸಚಿವರ ಗುಂಪಿನಲ್ಲಿ (ಜಿಒಎಂ) ಆಗಸ್ಟ್ 21ರಂದು ಚರ್ಚಿಸಲಾಗುತ್ತದೆ. ನಂತರದಲ್ಲಿ ಈ ಪ್ರಸ್ತಾವವನ್ನು ಜಿಎಸ್ಟಿ ಮಂಡಳಿಯು ಕೈಗೆತ್ತಿಕೊಳ್ಳುವ ನಿರೀಕ್ಷೆ ಇದೆ.

ಶೇ 40ರಷ್ಟು ತೆರಿಗೆಯನ್ನು ತಂಬಾಕಿನಂತಹ ಕೆಲವೇ ಕೆಲವು ಉತ್ಪನ್ನಗಳಿಗೆ ವಿಧಿಸಲಾಗುತ್ತದೆ. ಈ ಪ್ರಮಾಣದ ತೆರಿಗೆ ವ್ಯಾಪ್ತಿಯಲ್ಲಿ ಗರಿಷ್ಠ ಏಳು ಉತ್ಪನ್ನಗಳು ಬರಬಹುದು ಎಂದು ಮೂಲವೊಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.