ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂಗಳ ರಿಟರ್ನ್ಸ್‌ನಲ್ಲಿಇ–ವೇ ಬಿಲ್‌ ಮಾಹಿತಿ

Last Updated 30 ಜನವರಿ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ಸರಕು ಸಾಗಣೆ ವಹಿವಾಟು ನಡೆಸುವವರು ತಿಂಗಳ ರಿಟರ್ನ್ಸ್‌ನಲ್ಲಿಯೇ ಇ–ವೇ ಬಿಲ್‌ ಮಾಹಿತಿಯನ್ನೂ ಸೇರಿಸುವ ವ್ಯವಸ್ಥೆಯನ್ನು ಸರಕು ಮತ್ತು ಸೇವಾ ತೆರಿಗೆ ಜಾಲತಾಣ (ಜಿಎಸ್‌ಟಿಎನ್‌) ಅಭಿವೃದ್ಧಿಪಡಿಸಿದೆ.

ಸರಕುಗಳ ಪೂರೈಕೆಯ ಎರಡು ಪ್ರತ್ಯೇಕ ದಾಖಲೆ ಪತ್ರಗಳನ್ನು ನೀಡುವ ಮೂಲಕ ತೆರಿಗೆ ತಪ್ಪಿಸುವುದನ್ನು ತಡೆಯುವುದು ಇದರ ಉದ್ದೇಶವಾಗಿದೆ.

‘ಜಿಎಸ್‌ಟಿಆರ್‌–1 ಅರ್ಜಿ ನಮೂನೆಯಲ್ಲಿ ಇ–ವೇ ಬಿಲ್‌ ಮಾಹಿತಿಯನ್ನು ತುಂಬಬೇಕು. ಇ–ವೇ ಬಿಲ್‌ ಪಡೆಯುವಾಗ ಸರಕು ಪೂರೈಸುವವರು, ಪಡೆಯುವವರು, ಸಂಖ್ಯೆ, ದಿನಾಂಕ, ಸರಕಿನ ಪ್ರಮಾಣ, ಇತ್ಯಾದಿ ಮಾಹಿತಿಗಳನ್ನು ಇ–ವೇ ಬಿಲ್‌ ಜಾಲತಾಣದಲ್ಲಿ ನೀಡಬೇಕು. ಈ ಮಾಹಿತಿಗಳು ಜಿಎಸ್‌ಟಿಎನ್‌ಗೆ ವರ್ಗಾವಣೆಯಾಗಲಿವೆ. ತೆರಿಗೆ ವಂಚನೆ ತಡೆಯುವುದರ ಜತೆಗೆ, ಎರಡು ಬಾರಿ ಮಾಹಿತಿ ತುಂಬುವುದು, ಮಾಹಿತಿ ಸಲ್ಲಿಸುವಾಗ ತಪ್ಪಾಗುವ ಪ್ರಮೇಯ ಎದುರಾಗುವುದಿಲ್ಲ’ ಎಂದು ಜಿಎಸ್‌ಟಿಎನ್‌ ಸಿಇಒ ಪ್ರಕಾಶ್‌ ಕುಮಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT