ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಸಿರಿವಂತ ಮಹಿಳೆ: ರೋಶನಿ ನಾಡಾರ್

Last Updated 3 ಡಿಸೆಂಬರ್ 2020, 18:04 IST
ಅಕ್ಷರ ಗಾತ್ರ

ಮುಂಬೈ: ದೇಶದ 100 ಸಿರಿವಂತ ಮಹಿಳೆಯರ ಪಟ್ಟಿಯಲ್ಲಿ ಎಚ್‌ಸಿಎಲ್‌ ಟೆಕ್ನಾಲಜೀಸ್‌ನ ಅಧ್ಯಕ್ಷೆ ರೋಶನಿ ನಾಡಾರ್ ಮಲ್ಹೋತ್ರಾ ಮೊದಲ ಸ್ಥಾನದಲ್ಲಿದ್ದಾರೆ. ಇವರ ನಿವ್ವಳ ಸಂಪತ್ತಿನ ಮೌಲ್ಯ ₹ 54,850 ಕೋಟಿ ಇದೆ.

ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್ ಶಾ ಅವರ ನಿವ್ವಳ ಸಂಪತ್ತು ಮೌಲ್ಯ ₹ 36,600 ಕೋಟಿಗಳಷ್ಟಿದ್ದು, ಎರಡನೇ ಸ್ಥಾನದಲ್ಲಿದ್ದಾರೆ.

ಹುರುನ್‌ ಇಂಡಿಯಾ ಮತ್ತು ಕೋಟಕ್‌ ವೆಲ್ತ್‌ ಜಂಟಿಯಾಗಿ ಈ ಪಟ್ಟಿ ಬಿಡುಗಡೆ ಮಾಡಿವೆ. ಇದರಲ್ಲಿ 31 ಮಹಿಳೆಯರು ಕನಿಷ್ಠ ₹ 100 ಕೋಟಿ ನಿವ್ವಳ ಸಂಪತ್ತು ಮೌಲ್ಯ ಹೊಂದಿದ್ದಾರೆ. ಇವರೆಲ್ಲರೂ ಸ್ವ–ಪರಿಶ್ರಮದಿಂದ ಈ ಸ್ಥಾನ ತಲುಪಿದವರಾಗಿದ್ದಾರೆ ಎಂದು ಪಟ್ಟಿಯಲ್ಲಿ ಹೇಳಲಾಗಿದೆ. ಇವರಲ್ಲಿ ಆರು ಮಂದಿ ವೃತ್ತಿಪರ ಮ್ಯಾನೇಜರ್‌ ಹಾಗೂ 25 ಉದ್ಯಮಿಗಳಿದ್ದಾರೆ.

ಜೊಹೊ ಕಂಪನಿಯ ರಾಧಾ ವೆಂಬು (₹11,590 ಕೋಟಿ) ಹಾಗೂ ಅರಿಸ್ಟಾ ನೆಟ್‌ವರ್ಕ್ಸ್‌ನ ಸಿಇಒ ಜಯಶ್ರೀ ಉಲ್ಲಾಳ್‌ ( ₹ 10,220 ಕೋಟಿ) ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ. ಐದನೇ ಸ್ಥಾನದಲ್ಲಿ ನೈಕಾ ಸಂಸ್ಥೆಯ ಸ್ಥಾಪಕಿ ಫಲ್ಗುಣಿ ನಾಯರ್‌ ಹಾಗೂ ಆರನೇ ಸ್ಥಾನದಲ್ಲಿ ಬೈಜೂಸ್‌ನ ಸಹ ಸ್ಥಾಪಕಿ ದಿವ್ಯಾ ಗೋಕುಲ್‌ನಾಥ್‌ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT