ಗುರುವಾರ , ಅಕ್ಟೋಬರ್ 29, 2020
21 °C

ಎಚ್‌ಸಿಎಲ್‌ ಟೆಕ್ನಾಲಜಿ ಲಾಭ ಶೇ 18ರಷ್ಟು ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಐ.ಟಿ. ಕಂಪನಿ ಎಚ್‌ಸಿಎಲ್‌ ಟೆಕ್ನಾಲಜೀಸ್‌ನ ನಿವ್ವಳ ಲಾಭವು ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಶೇಕಡ 18.5ರಷ್ಟು ಹೆಚ್ಚಾಗಿದ್ದು ₹ 3,142 ಕೋಟಿಗೆ ತಲುಪಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಕಂಪನಿಯು ₹ 2,651 ಕೋಟಿ ನಿವ್ವಳ ಲಾಭ ಗಳಿಸಿತ್ತು.

ಕಂಪನಿಯ ವರಮಾನ ಶೇ 6.1ರಷ್ಟು ಹೆಚ್ಚಾಗಿದ್ದು ₹17,528 ಕೋಟಿಗಳಿಂದ ₹ 18,594 ಕೋಟಿಗಳಿಗೆ ಏರಿಕೆಯಾಗಿದೆ. ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಗರಿಷ್ಠ ಒಂಬತ್ತು ಸಾವಿರ ಜನ ಹೊಸಬರಿಗೆ ಉದ್ಯೋಗ ನೀಡುವ ಆಲೋಚನೆ ಇದೆ ಎಂದು ಕಂಪನಿ ತಿಳಿಸಿದೆ.

ಕಂಪನಿಯ ತ್ರೈಮಾಸಿಕ ಫಲಿತಾಂಶ ಪ್ರಕಟವಾದ ನಂತರ, ಲಾಭ ಗಳಿಕೆಯ ವಹಿವಾಟಿಗೆ ಒಳಗಾಗಿ ಕಂಪನಿಯ ಷೇರು ಬೆಲೆ ಶೇ 3.76ರಷ್ಟು ಇಳಿಕೆ ಕಂಡಿತು. ವಹಿವಾಟಿನ ಅಂತ್ಯದ ವೇಳಗೆ ಒಂದು ಷೇರಿನ ಬೆಲೆ ₹ 827.10ರಷ್ಟಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು