ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ‘ಸ್ಮಾರ್ಟ್‌ಹಬ್‌ ವ್ಯಾಪಾರ್‌’ ಆ್ಯಪ್‌ ಬಿಡುಗಡೆ

Last Updated 6 ಅಕ್ಟೋಬರ್ 2022, 19:40 IST
ಅಕ್ಷರ ಗಾತ್ರ

ಬೆಂಗಳೂರು: ಎಚ್‌ಡಿಎಫ್‌ಸಿ ಬ್ಯಾಂಕ್‌, ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯಾಪಾರಿಗಳಿಗೆ ‘ಸ್ಮಾರ್ಟ್‌ಹಬ್‌ ವ್ಯಾಪಾರ್’ ಆ್ಯಪ್‌ ಬಿಡುಗಡೆ ಮಾಡಿದೆ.

ವ್ಯಾಪಾರಿಗಳ ನಿತ್ಯದ ವಹಿವಾಟಿನ ಅಗತ್ಯಗಳನ್ನು ಈಡೇರಿಸಲು ‌ಪಾವತಿ ಮತ್ತು ಬ್ಯಾಂಕಿಂಗ್‌ ಪರಿಹಾರಗಳನ್ನು ಈ ಆ್ಯಪ್‌ ಒದಗಿಸುತ್ತದೆ ಎಂದು ತಿಳಿಸಿದೆ.

ಬ್ಯಾಂಕ್‌ನ ರಿಟೇಲ್‌ ಬ್ರ್ಯಾಂಚ್‌ ಬ್ಯಾಂಕಿಂಗ್‌ನ ಹಿರಿಯ ಉಪಾಧ್ಯಕ್ಷ ಎನ್‌. ಪ್ರೇಮಾನಂದ ಮತ್ತು ಗಣೇಶ್‌ ದೇವರಾಜನ್‌ ಅವರು ಆ್ಯಪ್‌ ಬಿಡುಗಡೆ ಮಾಡಿದರು.

ಕಾರ್ಡ್‌, ಯುಪಿಐ, ಕ್ಯುಆರ್‌ ಕೋಡ್‌ ಸೇರಿದಂತೆ ಹಲವು ರೀತಿಯ ಪಾವತಿ ವ್ಯವಸ್ಥೆಗೆ ಇದು ಬೆಂಬಲಿಸುತ್ತದೆ. ವ್ಯಾಪಾರಿಗಳು ಪಾವತಿ ಲಿಂಕ್‌ ಅನ್ನು ಮೊಬೈಲ್‌ ಅಥವಾ ಇ–ಮೇಲ್‌ ಮೂಲಕ ಕಳುಹಿಸಿಯೂ ಹಣ ಪಡೆಯಬಹುದಾಗಿದೆ ಎಂದು ಹೇಳಿದೆ.

ಯುಪಿಐ ಮೂಲಕ ಪಡೆಯುವ ಹಣವು ನೇರವಾಗಿ ಬ್ಯಾಂಕ್‌ ಖಾತೆಗೆ ವರ್ಗಾವಣೆ ಆಗಲಿದೆ. ಇದರಿಂದ ವ್ಯಾಪಾರಿಗಳು ಮಾರಾಟಕ್ಕೆ ಸಂಬಂಧಿಸಿದ ವಿವರಗಳನ್ನು ತಕ್ಷಣಕ್ಕೆ ಪಡೆಯಲು ಅನುಕೂಲ ಆಗಲಿದೆ. ಆಂಡ್ರಾಯ್ಡ್‌ ಮತ್ತು ಐಫೊನ್‌ಗೆ ಈ ಆ್ಯಪ್‌ ಬೆಂಬಲಿಸುತ್ತದೆ. ಹಣ ವರ್ಗಾವಣೆ ಆಗಿದೆ ಎನ್ನುವುದನ್ನು ಧ್ವನಿ ಆಧಾರಿತ ಸೂಚನೆಯು ಸಹ ಸಿಗಲಿದೆ. ಇದಕ್ಕಾಗಿ ಪ್ರತ್ಯೇಕವಾದ ಸಾಧನ ಹೊಂದುವ ಅಗತ್ಯ ಇಲ್ಲ ಎಂದು ಬ್ಯಾಂಕ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT