2023–24ರ ಆರ್ಥಿಕ ವರ್ಷದಲ್ಲಿ ₹15,100 ಕೋಟಿ ಮೌಲ್ಯದ ಆರೋಗ್ಯ ವಿಮೆ ಕ್ಲೇಮ್ ಅರ್ಜಿಗಳು ತಿರಸ್ಕೃತಗೊಂಡಿವೆ. ಇದೇ ಅವಧಿಯಲ್ಲಿ ಆರೋಗ್ಯ ವಿಮಾ ಕಂಪನಿಗಳು ಕಂತುಗಳ (ಪ್ರೀಮಿಯಂ) ಮೂಲಕ ₹1,07,681 ಕೋಟಿ ಸ್ವೀಕರಿಸಿವೆ. ಆರೋಗ್ಯ ವಿಮೆ ಕ್ಲೇಮ್ ಅರ್ಜಿ ತಿರಸ್ಕೃತಗೊಳ್ಳಲು ಕಾರಣಗಳೇನು? ತಿರಸ್ಕಾರ ಆಗದಿದ್ದರೆ ಏನು ಮಾಡಬೇಕು?

ತಿರಸ್ಕಾರಕ್ಕೆ ಪ್ರಮುಖ ಕಾರಣ

ಆರೋಗ್ಯ ವಿಮೆ ಪಾಲಿಸಿ ತೆಗೆದುಕೊಳ್ಳುವಾಗ ತಮಗೆ ಈಗಾಗಲೇ ಇರುವ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡದೇ ಇರುವುದು

ಆಸ್ಪತ್ರೆಗೆ ದಾಖಲಾದಾಗ ಕೊಠಡಿ ಬಾಡಿಗೆ, ವೈದ್ಯರ ಶುಲ್ಕ, ಡಯಾಗ್ನಾಸ್ಟಿಕ್ಸ್ ಸೇರಿದಂತೆ ಇತರೆ ವೆಚ್ಚ ವಿಮೆಯಲ್ಲಿ ತಿಳಿಸಿದ ಮಿತಿಗಿಂತ ಹೆಚ್ಚಿರುವುದು

ವಿಮಾ ಕಂಪನಿಗಳಿಂದ ಕಪ್ಪುಪಟ್ಟಿಗೆ ಸೇರಿದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿರುವುದು

ಕ್ಲೇಮ್ ಸಲ್ಲಿಸುವಾಗ ನೀಡಿದ ಹೆಸರು, ವಯಸ್ಸು, ದೂರವಾಣಿ ಸಂಖ್ಯೆ ಸೇರಿದಂತೆ ವಿವಿಧ ಮಾಹಿತಿಯು ಮೂಲ ದಾಖಲಾತಿಗಳಲ್ಲಿನ ಮಾಹಿತಿಗೆ ಹೊಂದಾಣಿಕೆ ಆಗದೇ ಇರುವುದು

ವಿಮೆಗೆ ಇರುವ ಕಾಯುವಿಕೆ ಅವಧಿಯೊಳಗೆ ಕ್ಲೇಮ್ ಸಲ್ಲಿಸಿರುವುದು

ಅವಧಿ ಮೀರಿದ್ದರೂ ಆರೋಗ್ಯ ವಿಮೆ ನವೀಕರಿಸದೇ ಇರುವುದು

ನಿಗದಿತ ಅವಧಿಯೊಳಗೆ ಕ್ಲೇಮ್ ಸಲ್ಲಿಸದೆ ವಿಳಂಬ ಮಾಡುವುದು

ಆಸ್ಪತ್ರೆಯ ಬಿಲ್ಗಳು, ಡಿಸ್ಚಾರ್ಜ್ ಪ್ರಮಾಣಪತ್ರ, ಇತರ ವರದಿಗಳು ಸೇರಿದಂತೆ ಸೂಕ್ತ ದಾಖಲೆಗಳು ಇಲ್ಲದಿರುವುದು

ಹಲವಾರು ಬಾರಿ ಆಸ್ಪತ್ರೆಗೆ ದಾಖಲಾಗಿ ವಿಮೆ ಗರಿಷ್ಠ ಮೊತ್ತದ ಮಿತಿ ದಾಟಿರುವುದು

ಆರೋಗ್ಯ ವಿಮಾ ಕಂಪನಿಗಳು ಪಾಲಿಸಿಯಲ್ಲಿ ಬದಲಾವಣೆ ತಂದಿರುವುದನ್ನು ಪಾಲಿಸಿದಾರರು ಗಮನಿಸದೇ ಇರುವುದು

ತಿರಸ್ಕಾರ ಆಗದೇ ಇರಲು ಮಾಡಬೇಕಾದದ್ದೇನು?

ಆರೋಗ್ಯ ವಿಮೆಯ ನಿಯಮಗಳನ್ನು ಓದಿ, ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುವುದು

ಪಾಲಿಸಿ ತೆಗೆದುಕೊಳ್ಳುವಾಗ ವೈದ್ಯಕೀಯ ಹಿನ್ನೆಲೆಯ ನಿಖರ ಮಾಹಿತಿ ನೀಡುವುದು

ಆಸ್ಪತ್ರೆಗೆ ದಾಖಲಾಗುವ ಮೊದಲು, ದಾಖಲಾದ ಬಳಿಕ ವಿಮಾ ಕಂಪನಿಗೆ ಮಾಹಿತಿ ನೀಡುವುದು

ಆರೋಗ್ಯ ವಿಮೆಯಲ್ಲಿ ಎಷ್ಟು ಮೊತ್ತ ಕ್ಲೇಮ್ಗೆ ಲಭ್ಯವಾಗುವಂತೆ ಇದೆ ಎಂಬುದನ್ನು ನೋಡಿಕೊಳ್ಳುವುದು

ಕ್ಲೇಮ್ ಸಲ್ಲಿಸುವ ಪೂರ್ವದಲ್ಲಿ ಕಾಯುವಿಕೆ ಅವಧಿಯನ್ನು ಖಚಿತಪಡಿಸಿಕೊಳ್ಳುವುದು

ಸಕಾಲಕ್ಕೆ ವಿಮೆಯನ್ನು ನವೀಕರಣ ಮಾಡಿಕೊಳ್ಳುವುದು

ಕ್ಲೇಮ್ ತಿರಸ್ಕಾರವನ್ನು ಪರಿಶೀಲಿಸುವಂತೆ ಕೋರಿ ವಿಮಾ ಕಂಪನಿಗೆ ಪತ್ರವನ್ನು ಬರೆಯುವುದು

ಆಧಾರ: ಕೇಂದ್ರ ಹಣಕಾಸು ಸಚಿವಾಲಯ ರಾಜ್ಯಸಭೆಗೆ ನೀಡಿದ ಮಾಹಿತಿ, ಪಾಲಿಸಿ ಬಜಾರ್, ಸ್ಟಾರ್ ಹೆಲ್ತ್ ಇನ್ಶೂರೆನ್ಸ್, ಎಸ್ಬಿಐ ಜನರಲ್ ಇನ್ಶೂರೆನ್ಸ್, ಎಚ್ಡಿಎಫ್ಸಿ ಇಆರ್ಜಿಒ ವೆಬ್ಸೈಟ್ಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.