ಬೆಂಗಳೂರು: "ಕೇಂದ್ರದ ಪರವಾನಗಿ ಪಡೆಯದೆ ಗೂಗಲ್ ಐರ್ಲೆಂಡ್ ಮತ್ತು ಗೂಗಲ್ ಯುಎಸ್ ಜೊತೆಗೆ ಕೋಟ್ಯಂತರ ರೂಪಾಯಿಗಳ ವಹಿವಾಟು ನಡೆಸಲಾಗಿದೆ" ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬೆಂಗಳೂರಿನ ಜಾರಿ ನಿರ್ದೇಶನಾಲಯ (ಇ.ಡಿ) ಗೂಗಲ್ ಇಂಡಿಯಾಗೆ ₹ 5.25 ಕೋಟಿ ದಂಡ ವಿಧಿಸಿತ್ತು. ಈ ಆದೇಶಕ್ಕೆ ದೆಹಲಿಯ ಮೇಲ್ಮನವಿ ಪ್ರಾಧಿಕಾರ ತಡೆ ನೀಡಿತ್ತು. ಈ ತಡೆ ಆದೇಶದ ತೀರ್ಪನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ.

"ಮೇಲ್ಮನವಿ ಪ್ರಾಧಿಕಾರದ ಆದೇಶ ರದ್ದುಪಡಿಸಬೇಕು" ಎಂದು ಕೋರಿ ಬೆಂಗಳೂರು ವಲಯದ ಇ.ಡಿ ಉಪ ನಿರ್ದೇಶಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಕಾಮೇಶ್ವರ್ ರಾವ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

"ಗೂಗಲ್ ಇಂಡಿಯಾದ ಪ್ರತಿನಿಧಿಗಳು ದಂಡದ ಮೊತ್ತದಲ್ಲಿ ಶೇ 50ರಷ್ಟು ಮೊತ್ತಕ್ಕೆ ಮುಂದಿನ ಎರಡು ವಾರಗಳಲ್ಲಿ ಬ್ಯಾಂಕ್ ಗ್ಯಾರಂಟಿ ಒದಗಿಸಬೇಕು. ಈ ಗ್ಯಾರಂಟಿಯನ್ನು ಅರ್ಜಿ ಇತ್ಯರ್ಥವಾಗುವವರೆಗೂ ಉಳಿಸಿಕೊಳ್ಳಬೇಕು. ಅಂತೆಯೇ, ಗೂಗಲ್ ನೀಡುವ ಗ್ಯಾರಂಟಿ ಅರ್ಜಿ ಕುರಿತಂತೆ ಹೈಕೋರ್ಟ್ ಹೊರಡಿಸುವ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ" ಎಂದು ನ್ಯಾಯಪೀಠ ತಿಳಿಸಿದೆ.

"ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ನಿಯಮಗಳ ಪ್ರಕಾರ ಭಾರತದ ಕಂಪನಿಗಳು ವಿದೇಶಿ ಕಂಪನಿಗಳ ಜೊತೆ ಹಣದ ವ್ಯವಹಾರ ನಡೆಸುವ ಸಂದರ್ಭದಲ್ಲಿ ಆರ್ಬಿಐ ಅಥವಾ ಕೇಂದ್ರ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯ. ಆದರೆ, ಗೂಗಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯು, ಆರ್ಬಿಐ ಮತ್ತು ಕೇಂದ್ರ ಸರ್ಕಾರದಿಂದ ಪರವಾನಗಿ ಪಡೆಯದೇ ತನ್ನ ಮಾತೃ ಸಂಸ್ಥೆಗಳಾದ ಗೂಗಲ್ ಐರ್ಲೆಂಡ್ ಮತ್ತು ಗೂಗಲ್ ಯುಎಸ್ಗಳ ಜಾಹೀರಾತುಗಳನ್ನು ಅಕ್ರಮವಾಗಿ ಪ್ರಕಟಿಸಿದೆ. ಹಾಗೂ ಸ್ವತ್ತುಗಳನ್ನು ಖರೀದಿಸಿದೆ. ಈ ಮೂಲಕ ₹ 365.59 ಕೋಟಿ ವ್ಯವಹಾರ ನಡೆಸಿದೆ" ಎಂದು ಆರೋಪಿಸಿ ಗೂಗಲ್ ಇಂಡಿಯಾ ಸಂಸ್ಥೆಗೆ ಬೆಂಗಳೂರು ವಲಯದ ಇ.ಡಿ ಉಪ ನಿರ್ದೇಶಕರು ₹5.25 ಕೋಟಿ ದಂಡ ವಿಧಿಸಿ ಆದೇಶಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.