ಶನಿವಾರ, ಆಗಸ್ಟ್ 13, 2022
27 °C

ಕೈಗಾರಿಕಾ ಪಾರ್ಕ್‌: ಹೀರಾನಂದಾನಿ ಸಮೂಹದಿಂದ ₹ 8,500 ಕೋಟಿ ಹೂಡಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವಿವಿಧ ನಗರಗಳಲ್ಲಿ ದತ್ತಾಂಶ ಕೇಂದ್ರ ಮತ್ತು ಕೈಗಾರಿಕಾ ಪಾರ್ಕ್‌ಗಳನ್ನು ನಿರ್ಮಾಣ ಮಾಡಲು ಮುಂದಿನ ಮೂರು ವರ್ಷಗಳಲ್ಲಿ ₹ 8,500 ಕೋಟಿ ಹೂಡಿಕೆ ಮಾಡಲು ರಿಯಲ್‌ ಎಸ್ಟೇಟ್‌ ವಲಯದ ಹೀರಾನಂದಾನಿ ಸಮೂಹ ನಿರ್ಧರಿಸಿದೆ.

ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ಏಪ್ರಿಲ್‌–ಜೂನ್‌ ತ್ರೈಮಾಸಿಕದಲ್ಲಿ ರಿಯಲ್‌ ಎಸ್ಟೇಟ್‌ ಮಾರಾಟದ ಮೇಲೆ ಭಾರಿ ಪರಿಣಾಮ ಉಂಟಾಗಿತ್ತು. ಮರುಕಟ್ಟೆಯು ಇದೀಗ ಚೇತರಿಸಿಕೊಳ್ಳುತ್ತಿದೆ. ಪ್ರಮುಖ ನಗರಗಳಲ್ಲಿ ವಸತಿ ಮಾರಾಟವು 2019ರ ನವೆಂಬರ್‌ಗೆ ಹೋಲಿಸಿದರೆ 2020ರ ನವೆಂಬರ್‌ನಲ್ಲಿ ಶೇಕಡ 20ರಷ್ಟು ಏರಿಕೆ ಕಂಡಿದೆ ಎಂದು ಹೀರಾನಂದಾನಿ ಸಮೂಹದ ಅಧ್ಯಕ್ಷ ನಿರಂಜನ್‌ ಹೀರಾನಂದಾನಿ ಅವರು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

2019ಕ್ಕೆ ಹೋಲಿಸಿದರೆ 2020ರಲ್ಲಿ ಒಟ್ಟಾರೆ ಮಾರಾಟವು ಶೇ 15ರಿಂದ ಶೇ 20ರಷ್ಟು ಕಡಿಮೆ ಇರಲಿದೆ ಎನ್ನುವುದು ಅವರ ನಿರೀಕ್ಷೆ. ಕೋವಿಡ್‌–19 ಸಾಂಕ್ರಾಮಿಕಕ್ಕೆ ಲಸಿಕೆ ಲಭ್ಯವಾಗುತ್ತಿರುವುದರಿಂದ 2021ರ ಮಾರ್ಚ್‌ ವೇಳೆಗೆ ವಾಣಿಜ್ಯ ಚಟುವಟಿಕೆಗಳು ಸಹಜ ಸ್ಥಿತಿಗೆ ಮರಳುವ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

ಏಷ್ಯಾದ ಅತಿದೊಡ್ಡ ದತ್ತಾಂಶ ಕೇಂದ್ರವನ್ನು ನವಿ ಮುಂಬೈನಲ್ಲಿ ಸ್ಥಾಪಿಸಲಾಗಿದೆ. ಎರಡನೆಯದು ಗ್ರೇಟರ್ ನೊಯಿಡಾದಲ್ಲಿ ಹಾಗೂ ಮೂರನೆಯದು ಚೆನ್ನೈ ಬಳಿ ನಿರ್ಮಾಣವಾಗಲಿದೆ ಎಂದು ವಿವರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು