ಎರಡಂಕಿ ಪ್ರಗತಿ: ಹೋಂಡಾ

7

ಎರಡಂಕಿ ಪ್ರಗತಿ: ಹೋಂಡಾ

Published:
Updated:

ಬೆಂಗಳೂರು: ‘ದ್ವಿಚಕ್ರ ವಾಹನ ಮಾರುಕಟ್ಟೆ ಉತ್ತಮ ಬೆಳವಣಿಗೆ ಕಾಣುತ್ತಿದ್ದು, ಈ ವರ್ಷ ಎರಡಂಕಿ ಪ್ರಗತಿ ಸಾಧಿಸುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ’ ಎಂದು ಹೋಂಡಾ ಮೋಟರ್‌ ಸೈಕಲ್‌ ಆ್ಯಂಡ್‌ ಸ್ಕೂಟರ್‌ ಇಂಡಿಯಾದ ಅಧ್ಯಕ್ಷ ಮಿನೊರು ಕಟೊ ತಿಳಿಸಿದರು.

‘ಗ್ರಾಮೀಣ ಭಾಗದಲ್ಲಿ ವಹಿವಾಟು ವಿಸ್ತರಣೆಗೆ ಹೆಚ್ಚಿನ ಅವಕಾಶವಿದೆ. ಅರೆ ನಗರ ಪ್ರದೇಶಗಳಲ್ಲಿ ಉತ್ತಮ ಬೇಡಿಕೆ ಇದೆ. ಮೋಟರ್‌ಸೈಕಲ್‌ ಹೊಂದಿರುವವರು ಸ್ಕೂಟರ್‌ ಖರೀದಿಸಲು ಮುಂದಾಗುತ್ತಿದ್ದಾರೆ. ಯುವ ಪೀಳಿಗೆಯೂ ಸ್ಕೂಟರ್‌ನತ್ತ ಆಕರ್ಷಿತರಾಗುತ್ತಿದ್ದಾರೆ. ಹೀಗಾಗಿ ದೇಶದಲ್ಲಿ ಸ್ಕೂಟರ್‌ ಮಾರಾಟದಲ್ಲಿ ಉತ್ತಮ ಪ್ರಗತಿ ಸಾಧ್ಯವಾಗಲಿದೆ’ ಎಂದು ಅವರು ಅಭಿಪ್ರಾಯಪಟ್ಟರು.

 ಸದ್ಯಕ್ಕೆ ಸ್ಕೂಟರ್‌ ಮಾರುಕಟ್ಟೆಯು ಶೇ 67 ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದು ಇನ್ನುಳಿದ ಪಾಲನ್ನು ಮೋಟರ್‌ಸೈಕಲ್‌ ಹೊಂದಿದೆ.

ಹೊಸ ಬ್ರ್ಯಾಂಡ್‌: ಈ ವರ್ಷ, ಸದ್ಯಕ್ಕೆ ಮಾರುಕಟ್ಟೆಯಲ್ಲಿ ಇರುವ ಎಲ್ಲಾ ಮಾದರಿಗಳನ್ನೂ ಮೇಲ್ದರ್ಜೆಗೆ ಏರಿಸಲಾಗುವುದು. ಜತೆಗೆ ಸಂಪೂರ್ಣವಾಗಿ ಒಂದು ಹೊಸ ಬ್ರ್ಯಾಂಡ್‌ ಪರಿಚಯಿಸಲಾಗುತ್ತಿದೆ. ದೀಪಾವಳಿ ಹಬ್ಬಕ್ಕೆ ಬರಲಿದೆ ಎನ್ನುವ ನಿರೀಕ್ಷೆ ಬೇಡ. ಹಬ್ಬದ ಬಳಿಕವೇ ಹೊಸ ಬ್ರ್ಯಾಂಡ್‌ ಮಾರುಕಟ್ಟೆಗೆ ಬರಲಿದೆ. ಸದ್ಯದ ಮಟ್ಟಿಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ’ ಎಂದರು.

‘ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ತಯಾರಿಕೆಯನ್ನೂ ಹೆಚ್ಚಿಸಲು ನಿರ್ಧರಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಹಬ್ಬದ ಸಂದರ್ಭದಲ್ಲಿ ಗ್ರಾಹಕರನ್ನು ಹಿಡಿದಿಡಲು ನಮ್ಮ ವಿತರಕರು ಎಲ್ಲಾ ರೀತಿಯಲ್ಲೂ ಸಜ್ಜಾಗಿದ್ದಾರೆ. 

ಬಿಎಸ್‌ 6: ‘ಬಿಎಸ್‌6 ಮಾನದಂಡ ಅಳವಡಿಕೆಗಾಗಿ ಕಂಪನಿ ಸಜ್ಜಾಗುತ್ತಿದೆ. ನಮ್ಮೆಲ್ಲಾ ಬಿಡಿಭಾಗ ಪೂರೈಕೆದಾರರು ತಮ್ಮ ಫ್ಯಾಕ್ಟರಿಗಳಲ್ಲಿ ಇನ್ನಷ್ಟೇ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕಾಗಿದೆ. ಫ್ಯೂಯೆಲ್‌ ಇಂಜೆಕ್ಷನ್‌, ಎಬಿಎಸ್‌, ಚೈಲ್ಡ್‌ ಲಾಕ್‌ ಒಳಗೊಂಡು ಇನ್ನೂ ಹಲವು ಹೊಸ ತಂತ್ರಜ್ಞಾನ ಆಧಾರಿತ ಸೌಲಭ್ಯಗಳನ್ನು ಅಳವಡಿಸಲಾಗುವುದು’ ಎಂದು ವಿವರಿಸಿದರು.

2018ರ ಮಾರ್ಚ್‌ ಅಂತ್ಯಕ್ಕೆ 61 ಲಕ್ಷ ವಾಹನಗಳನ್ನು ಮಾರಾಟ ಮಾಡಿದ್ದು, ಶೇ 22 ರಷ್ಟು ಪ್ರಗತಿ ಸಾಧ್ಯವಾಗಿದೆ. ಇದರಲ್ಲಿ 57.5 ಲಕ್ಷ
ದ್ವಿಚಕ್ರವಾಹನಗಳು ಸೇರಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !