ಮುಂಬೈ: ಹೋಂಡಾ ಮೋಟರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ತನ್ನ ಗ್ರಾಹಕರಿಗೆ ಸಂಪರ್ಕ ರಹಿತ ಸೇವೆಗಳನ್ನು ನೀಡಲು ಡಿಜಿಟಲ್ ಷೋರೂಂ ಶುರುಮಾಡಿದೆ.
ಉತ್ಪನ್ನಗಳ ವಿವರವಾದ ಡೆಮೊ, ಆನ್‌ಲೈನ್ ಮೂಲಕವೇ ದಾಖಲೆಪತ್ರಗಳ ಸಲ್ಲಿಕೆ, ಮನೆ ಬಾಗಿಲಿಗೆ ವಿತರಣೆ ಹಾಗೂ ವರ್ಚುವಲ್ ಚಾಟ್ ಬೆಂಬಲ ಸೇರಿದಂತೆ ಹಲವು ವೈಶಿಷ್ಟ್ಯಗಳು ಈ ಷೋರೂಂನಲ್ಲಿ ಇವೆ ಎಂದು ಕಂಪನಿ ತಿಳಿಸಿದೆ.
‘ಗ್ರಾಹಕರ ಸುರಕ್ಷತೆ ಮತ್ತು ಅನುಕೂಲವನ್ನು ಗಮನದಲ್ಲಿ ಇಟ್ಟುಕೊಂಡು ನಮ್ಮ ಉತ್ಪನ್ನಗಳನ್ನು ಗ್ರಾಹಕರಿಗೆ ಹತ್ತಿರವಾಗಿಸಲು ಈ ವರ್ಚುವಲ್ ಷೋರೂಂ ಆರಂಭ ಮಾಡಲಾಗಿದೆ’ ಎಂದು ಕಂಪನಿಯ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ ಯದುವೀಂದರ್ ಸಿಂಗ್ ಗುಲೇರಿಯಾ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.