ಹೋಂಡಾ ಕಂಪನಿಗೆ ಕರ್ನಾಟಕದಲ್ಲಿ 40 ಲಕ್ಷ ಗ್ರಾಹಕರು
ಬೆಂಗಳೂರು: ಹೋಂಡಾ ಮೋಟಾರ್ ಸೈಕಲ್ ಆ್ಯಂಡ್ ಸ್ಕೂಟರ್ ಕಂಪನಿಯು ರಾಜ್ಯದಲ್ಲಿ ಒಟ್ಟು 40 ಲಕ್ಷಕ್ಕಿಂತ ಹೆಚ್ಚು ಗ್ರಾಹಕರನ್ನು ಪಡೆದಿರುವುದಾಗಿ ಹೇಳಿದೆ.
ಕರ್ನಾಟಕದಲ್ಲಿ ಮೊದಲ 20 ಲಕ್ಷ ಗ್ರಾಹಕರನ್ನು ಹೊಂದಲು ಹೋಂಡಾ ದ್ವಿಚಕ್ರ ವಾಹನ ಕಂಪನಿಯು 16 ವರ್ಷ ತೆಗೆದುಕೊಂಡಿತ್ತು. ಈಗ ಐದೇ ವರ್ಷಗಳಲ್ಲಿ ಮತ್ತೆ 20 ಲಕ್ಷ ಗ್ರಾಹಕರನ್ನು ಕಂಪನಿಯು ತನ್ನದಾಗಿಸಿಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.
ಹೊಸ ಮಾದರಿಯ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ವಿಶ್ವಾಸಾರ್ಹ ಗ್ರಾಹಕ ಸೇವೆ ಒದಗಿಸಿದ್ದು ಈ ಸಾಧನೆಗೆ ಕಾರಣವಾಗಿವೆ ಎಂದು ಕಂಪನಿ ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.