ಗುರುವಾರ , ಜೂನ್ 30, 2022
24 °C

ಮರೈನ್‌ ಔಟ್‌ಬೋರ್ಡ್‌ ಮೋಟರ್‌ ಕ್ಷೇತ್ರಕ್ಕೆ ಹೋಂಡಾ ಪ್ರವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೋಂಡಾ ಇಂಡಿಯಾ ಪವರ್‌ ಪ್ರಾಡಕ್ಟ್ಸ್‌ (ಎಚ್‌ಐಪಿಪಿ) ಕಂಪನಿಯು ಮರೈನ್‌ ಔಟ್‌ಬೋರ್ಡ್‌ (ಪವರ್‌ ಬೋಟ್‌) ವ್ಯಾಪಾರ ಕ್ಷೇತ್ರವನ್ನು ಪ್ರವೇಶಿಸುವುದಾಗಿ ಬುಧವಾರ ಹೇಳಿದೆ.

6 ಎಚ್‌ಪಿ ಮೋಟರ್‌ ಬೆಲೆಯು ₹ 1.8 ಲಕ್ಷ ಹಾಗೂ 250 ಎಚ್‌ಪಿ ಬೆಲೆಯು ₹ 23 ಲಕ್ಷ ಇರಲಿದೆ ಎಂದು ಕಂಪನಿ ಹೇಳಿದೆ.

‘ಹೋಂಡಾ 4 ಸ್ಟ್ರೋಕ್‌ ಮರೈನ್‌ ಔಟ್‌ಬೋರ್ಡ್‌ ಮೋಟರ್‌ ಸರಣಿಗಳನ್ನು ಏಪ್ರಿಲ್‌ನಿಂದ ಬಿಡುಗಡೆ ಮಾಡುವುದಾಗಿ ಹೇಳಿದೆ. ಕಡಲ ರಕ್ಷಣೆಯಲ್ಲಿ ತೊಡಗಿರುವ ಸರ್ಕಾರದ ಹಲವು ಸಂಸ್ಥೆಗಳು, ಕೋಸ್ಟಲ್‌ ಗಾರ್ಡ್‌, ಗ್ರಾಹಕರು ಮತ್ತು ಪ್ರವಾಸಿಗರಿಗೆ ಟ್ಯಾಕ್ಸಿ ಬೋಟ್‌ ಸೇವೆ ನೀಡುವವರು, ವಾಣಿಜ್ಯ ಉದ್ದೇಶದ ಮೀನುಗಾರಿಕೆ ನಡೆಸುವವರನ್ನು ಗಮನದಲ್ಲಿ ಇಟ್ಟುಕೊಂಡು ಈ ಮೋಟರ್‌ಗಳನ್ನು ಬಿಡುಗಡೆ ಮಾಡಲಾಗುತ್ತಿದೆ’ ಎಂದು ಕಂಪನಿಯ ಅಧ್ಯಕ್ಷ ಟಕಹಿರೊ ಉಯೇಡಾ ಹೇಳಿದರು.

ಪ್ರವಾಸ, ಕಡಲ ಸುರಕ್ಷತೆ ಮತ್ತು ಮೀನುಗಾರಿಕೆಗೆ ಬಳಸುವ ಬೋಟ್‌ಗಳು 2 ಸ್ಟ್ರೋಕ್‌ನಿಂದ 4 ಸ್ಟ್ರೋಕ್‌ ತಂತ್ರಜ್ಞಾನದೆಡೆಗೆ ಸಾಗುತ್ತಿವೆ. ಈ ಅವಕಾಶವನ್ನು ಬಳಸಿಕೊಳ್ಳಲು ಕಂಪನಿಯು ಯೋಜನೆ ರೂಪಿಸಿದೆ ಎಂದು ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು