ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೆಸ್ಟೋರೆಂಟ್‌ಗಳಲ್ಲಿ ಸೇವಾ ಶುಲ್ಕ ವಿಧಿಸುವಂತಿಲ್ಲ: ಮಾರ್ಗಸೂಚಿ ಬಿಡುಗಡೆ

Published : 4 ಜುಲೈ 2022, 14:31 IST
ಫಾಲೋ ಮಾಡಿ
Comments

ನವದೆಹಲಿ: ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಸ್ವಯಂಚಾಲಿತವಾಗಿ ಅಥವಾ ಪೂರ್ವ ನಿಯೋಜಿತವಾಗಿ ಆಹಾರದ ಬಿಲ್‌ಗಳಿಗೆ ಸೇವಾ ಶುಲ್ಕ ವಿಧಿಸುವುದನ್ನು ಕೇಂದ್ರದ ಗ್ರಾಹಕ ರಕ್ಷಣಾ ಪ್ರಾಧಿಕಾರವು(ಸಿಸಿಪಿಎ) ನಿಷೇಧಿಸಿದೆ. ನಿಯಮ ಉಲ್ಲಂಘಿಸಿದರೆ ದೂರು ದಾಖಲಿಸಲು ಸಹ ಗ್ರಾಹಕರಿಗೆ ಅನುವುಮಾಡಿಕೊಟ್ಟಿದೆ.

ಈ ಕುರಿತಂತೆ ಕೇಳಿಬಂದ ದೂರುಗಳ ಹಿನ್ನೆಲೆಯಲ್ಲಿ, ಅನ್ಯಾಯದ ವ್ಯಾಪಾರದ ಅಭ್ಯಾಸಗಳು ಮತ್ತು ಸೇವಾ ಶುಲ್ಕ ಹೇರುವ ಮೂಲಕ ಗ್ರಾಹಕರ ಹಕ್ಕುಗಳ ಉಲ್ಲಂಘನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಿಸಿಪಿಎ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಮಾರ್ಗಸೂಚಿಗಳ ಪ್ರಕಾರ, ‘ಯಾವುದೇ ಹೋಟೆಲ್ ಅಥವಾ ರೆಸ್ಟೋರೆಂಟ್‌ಗಳು ಸ್ವಯಂಚಾಲಿತವಾಗಿ ಅಥವಾ ಪೂರ್ವಯೋಜಿತವಾಗಿ ಆಹಾರದ ಬಿಲ್‌ಗಳಲ್ಲಿ ಸೇವಾ ಶುಲ್ಕ ವಿಧಿಸುವಂತಿಲ್ಲ’ಜೊತೆಗೆ. ಯಾವುದೇ ಹೆಸರಿನಲ್ಲೂ ಸೇವಾ ಶುಲ್ಕ ಪಡೆಯುವಂತಿಲ್ಲ ಎಂದು ಅದು ಹೇಳಿದೆ.

ಯಾವುದೇ ಹೋಟೆಲ್ ಅಥವಾ ರೆಸ್ಟೋರೆಂಟ್‌ಗಳು ಸೇವಾ ಶುಲ್ಕ ಪಾವತಿಸುವಂತೆ ಗ್ರಾಹಕರ ಮೇಲೆ ಒತ್ತಡ ಹೇರುವಂತಿಲ್ಲ. ಸೇವಾ ಶುಲ್ಕವು ಸ್ವಇಚ್ಛೆ, ಐಚ್ಛಿಕ ಮತ್ತು ಗ್ರಾಹಕರ ವಿವೇಚನೆಗೆ ಬಿಟ್ಟಿದ್ದು ಎಂಬುದನ್ನು ಮೊದಲೇ ತಿಳಿಸಬೇಕು ಎಂದು ಅದು ಹೇಳಿದೆ.

‘ಯಾವುದೇ ಸೇವಾ ಶುಲ್ಕ ವಸೂಲಿಯ ಆಧಾರದ ಸೇವೆ ಒದಗಿಸುವ ಅಥವಾ ಪ್ರವೇಶ ನಿರ್ಬಂಧವನ್ನು ವಿಧಿಸುವಂತಿಲ್ಲ’ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

ಯಾವುದೇ ಹೋಟೆಲ್ ಅಥವಾ ರೆಸ್ಟೋರೆಂಟ್‌ಗಳು ನಿಯಮ ಮೀರಿ ಸೇವಾ ಶುಲ್ಕ ವಸೂಲಿ ಮಾಡುತ್ತಿರುವುದು ಕಂಡುಬಂದರೆ ಕೂಡಲೇ ಅದನ್ನು ತೆಗೆದುಹಾಕುವಂತೆ ಹೋಟೆಲ್‌ನ ಸಂಬಂಧಪಟ್ಟ ಸಿಬ್ಬಂದಿಯನ್ನು ಪ್ರಶ್ನಿಸಬಹುದು.

ಈ ಕುರಿತಂತೆ ರಾಷ್ಟ್ರೀಯ ಗ್ರಾಹಕರ ಹೆಲ್ಪ್‌ಲೈನ್(ಎನ್‌ಸಿಎಚ್‌)ಗೆ ದೂರು ನೀಡಬಹುದು. ಇದು ಪರ್ಯಾಯ ವ್ಯಾಜ್ಯ ಮರುಪರಿಶೀಲನೆ ವ್ಯವಸ್ಥೆಗಾಗಿ ಕೆಲಸ ಮಾಡುತ್ತದೆ. 1915ಗೆ ಕರೆಮಾಡುವ ಅಥವಾ NCH ಮೊಬೈಲ್ ಆ್ಯಪ್ ಮೂಲಕ ದೂರು ದಾಖಲಿಸಬಹುದು.

ಗ್ರಾಹಕರ ಆಯೋಗದಲ್ಲೂ ದೂರು ದಾಖಲಿಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT