ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಪಿ: 5 ಕೆ.ಜಿ ಗ್ಯಾಸ್‌ ಸಿಲಿಂಡರ್‌

Last Updated 5 ಜೂನ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನ ಮಾರಾಟ ಸಂಸ್ಥೆಯಾಗಿರುವ ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ (ಎಚ್‌ಪಿಸಿಎಲ್‌), ಗ್ರಾಹಕರ ಬಳಕೆಗಾಗಿ 5 ಕೆ.ಜಿ ಅಡುಗೆ ಅನಿಲ ಸಿಲಿಂಡರ್‌ (ಎಲ್‌ಪಿಜಿ) ‘ಅಪ್ಪು’ ಮಾರುಕಟ್ಟೆಗೆ ಪರಿಚಯಿಸಿದೆ.

ಕಾಲೇಜ್‌ ವಿದ್ಯಾರ್ಥಿಗಳು, ಪೇಯಿಂಗ್‌ ಗೆಸ್ಟ್‌ನಲ್ಲಿ ವಾಸಿಸುವವರು, ವಲಸೆ ಕಾರ್ಮಿಕರು, ಬೀದಿ ಬದಿ ಮಾರಾಟಗಾರರಿಗೆ ನೆರವಾಗಲು ಈ ಚಿಕ್ಕ ಗಾತ್ರದ ಎಲ್‌ಪಿಜಿ ಸಿಲಿಂಡರ್‌ ಪರಿಚಯಿಸಲಾಗಿದೆ.

ಶಾಶ್ವತ ಎಲ್‌ಪಿಜಿ ಸಂಪರ್ಕಕ್ಕಿಂತ ಈ ಸಿಲಿಂಡರ್‌ ಖರೀದಿಸುವುದು ಸುಲಭವಾಗಿದೆ. ಬೆಂಗಳೂರಿನಲ್ಲಿನ ಎಚ್‌ಪಿ ಅಡುಗೆ ಅನಿಲ ವಿತರಕರು ಮತ್ತು ಆಯ್ದ ಪೆಟ್ರೋಲ್‌ ಬಂಕ್‌ಗಳಲ್ಲಿ ಗುರುತಿನ ಯಾವುದಾದರೂ ದಾಖಲೆ ಸಲ್ಲಿಸಿ ಇದನ್ನು ಖರೀದಿಸಬಹುದು.

ಈ ಸಿಲಿಂಡರ್‌ ಬಳಕೆ ಮತ್ತು ಮಾರಾಟ ಉತ್ತೇಜಿಸಲು ಸಂಸ್ಥೆಯು, ‘ಅಪ್ಪು ಖರೀದಿಸಿ, 1 ಲೀಟರ್‌ ಪೆಟ್ರೋಲ್‌ ಉಚಿತ ಪಡೆಯಿರಿ’ ಆರಂಭಿಕ ಕೊಡುಗೆಯನ್ನೂ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT