ಭಾನುವಾರ, ನವೆಂಬರ್ 27, 2022
27 °C

ಎಚ್‌ಪಿ ಕಂಪನಿಯಲ್ಲಿ ಆರು ಸಾವಿರ ಉದ್ಯೋಗ ಕಡಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸ್ಯಾನ್‌ ಫ್ರಾನ್ಸಿಸ್ಕೊ (ಎಎಫ್‌ಪಿ): ಲ್ಯಾಪ್‌ಟಾಪ್‌ ಹಾಗೂ ಇತರ ಕಂಪ್ಯೂಟರ್‌ ತಯಾರಿಕಾ ಕಂಪನಿ ಹ್ಯೂಲೆಟ್‌ ಪ್ಯಾಕರ್ಡ್‌, ಮುಂದಿನ ಮೂರು ವರ್ಷಗಳಲ್ಲಿ ಒಟ್ಟು ಆರು ಸಾವಿರ ನೌಕರರನ್ನು ಕೆಲಸದಿಂದ ತೆಗೆಯುವುದಾಗಿ ಮಂಗಳವಾರ ಪ್ರಕಟಿಸಿದೆ.

ಎಚ್‌ಪಿ ಕಂಪನಿಯಲ್ಲಿ ಅಂದಾಜು 61 ಸಾವಿರ ನೌಕರರು ಇದ್ದಾರೆ. 2025ರ ಸುಮಾರಿಗೆ ವಾರ್ಷಿಕವಾಗಿ ಒಟ್ಟು 1.4 ಬಿಲಿಯನ್ ಡಾಲರ್ (ಅಂದಾಜು ₹ 11 ಸಾವಿರ ಕೋಟಿ) ಉಳಿತಾಯ ಮಾಡುವ ಉದ್ದೇಶ ಇದೆ ಎಂದು ಕಂಪನಿ ಹೇಳಿದೆ. ಮೆಟಾ, ಅಮೆಜಾನ್ ಮತ್ತು ಟ್ವಿಟರ್‌ನಂತಹ ಕಂಪನಿಗಳು ಕೂಡ ವೆಚ್ಚ ಕಡಿತದ ಮೊರೆ ಹೋಗಿವೆ.

‘ಈ ಕ್ರಮದಿಂದಾಗಿ ನಮಗೆ, ನಮ್ಮ ಗ್ರಾಹಕರಿಗೆ ಇನ್ನಷ್ಟು ಉತ್ತಮವಾದ ಸೇವೆ ಕೊಡಲು ಸಾಧ್ಯವಾಗುತ್ತದೆ. ವೆಚ್ಚಗಳನ್ನು ತಗ್ಗಿಸುವ ಮೂಲಕ ದೀರ್ಘಾವಧಿಯಲ್ಲಿ ಸಂಪತ್ತನ್ನು ಸೃಷ್ಟಿಸಲು ಕೂಡ ಆಗುತ್ತದೆ’ ಎಂದು ಕಂಪನಿಯ ಸಿಇಒ ಎನ್ರಿಕ್‌ ಲಾರೆಸ್ ಹೇಳಿದ್ದಾರೆ.

ಫೇಸ್‌ಬುಕ್‌ ಮಾಲೀಕತ್ವದ ಮೆಟಾ ಕಂಪನಿಯು 11 ಸಾವಿರ ನೌಕರರನ್ನು ಕೆಲಸದಿಂದ ತೆಗೆಯುವುದಾಗಿ ಹೇಳಿದೆ. ಟ್ವಿಟರ್ ಕಂಪನಿಯು ಉದ್ಯಮಿ ಎಲಾನ್‌ ಮಸ್ಕ್ ಅವರ ತೆಕ್ಕೆಗೆ ಸೇರಿದ ನಂತರದಲ್ಲಿ ಶೇಕಡ 50ರಷ್ಟು ನೌಕರರನ್ನು ಕೆಲಸದಿಂದ ತೆಗೆಯಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು